ಬೆಂಗಳೂರು: ಕಡಿಮೆ ವೆಚ್ಚದ ಏರ್ ಏಷ್ಯಾ ಇಂಡಿಯಾ ವಿಮಾನಯಾನ ಕಂಪನಿಯ ಅಷ್ಟೂ ಷೇರುಗಳನ್ನು ಖರೀದಿಸಲು ಟಾಟಾ ಸಮೂಹದ ಏರ್ ಇಂಡಿಯಾ, ಭಾರತೀಯ ಸ್ಪರ್ಧಾ ಆಯೋಗಕ್ಕೆ (ಸಿಸಿಐ) ಪ್ರಸ್ತಾವ ಸಲ್ಲಿಸಿದೆ. ಏರ್ ಏಷ್ಯಾದಲ್ಲಿ ಟಾಟಾ ಸಮೂಹವು ಶೇಕಡ 83.67ರಷ್ಟು ಷೇರುಗಳನ್ನು ಈಗಾಗಲೇ ಹೊಂದಿದೆ.
‘ಇದು ನಿರೀಕ್ಷಿತ ನಡೆ. ಬೇರೆ ಬೇರೆ ವಿಮಾನಯಾನ ಕಂಪನಿಗಳಲ್ಲಿ ಟಾಟಾ ಸಮೂಹ ಷೇರುಗಳನ್ನು ಹೊಂದಿರುವುದರಿಂದ ಹೆಚ್ಚಿನ ಪ್ರಯೋಜನವೇನೂ ಆಗದು’ ಎಂದು ಕಾನೂನು ಸಲಹಾ ಸಂಸ್ಥೆ ಸರಿನ್ ಆ್ಯಂಡ್ ಕಂಪನಿಯ ಕಾರ್ಯಾಚರಣೆ ಮುಖ್ಯಸ್ಥೆ ವಿನಮ್ರಾ ಲೊಂಗಾನಿ ಹೇಳಿದ್ದಾರೆ.
‘ಉದ್ದೇಶಿತ ಸ್ವಾಧೀನದಿಂದ ದೇಶದ ವಿಮಾನಯಾನ ಕ್ಷೇತ್ರದಲ್ಲಿನ ಸ್ಪರ್ಧಾತ್ಮಕ ವಾತಾವರಣದಲ್ಲಿ ಕೆಟ್ಟ ಬದಲಾವಣೆ ಆಗುವುದಿಲ್ಲ’ ಎಂದು ಪ್ರಸ್ತಾವದಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.