ADVERTISEMENT

ಸೂಪರ್ ಆ್ಯಪ್‌ ‘ನಿಯು’ಗೆ ಚಾಲನೆ ನೀಡಿದ ಟಾಟಾ

ಪಿಟಿಐ
Published 7 ಏಪ್ರಿಲ್ 2022, 14:18 IST
Last Updated 7 ಏಪ್ರಿಲ್ 2022, 14:18 IST
   

ನವದೆಹಲಿ (ಪಿಟಿಐ): ದಿನಸಿ ಖರೀದಿ, ವಿಮಾನ ಟಿಕೆಟ್ ಕಾಯ್ದಿರಿಸುವಿಕೆ, ಔಷಧ ಖರೀದಿ ಸೇರಿದಂತೆ ಹತ್ತು ಹಲವು ಸೇವೆಗಳನ್ನು ಒಂದೇ ಕಡೆ ಒದಗಿಸುವ ಸೂಪರ್‌ ಆ್ಯಪ್‌ ‘ನಿಯು’ಗೆ ಟಾಟಾ ಸಮೂಹ ಗುರುವಾರ ಚಾಲನೆ ನೀಡಿದೆ. ಈ ಮೂಲಕ ಅಮೆಜಾನ್, ಫ್ಲಿಪ್‌ಕಾರ್ಟ್‌ ಕಂಪನಿಗಳು ನೀಡುತ್ತಿರುವ ಇದೇ ಬಗೆಯ ಸೇವೆಗಳಿಗೆ ಸ್ಪರ್ಧೆ ಒಡ್ಡಿದೆ.

ಗ್ರಾಹಕರೇ ಮೊದಲು ಎಂಬ ಧ್ಯೇಯ ಹಾಗೂ ತಂತ್ರಜ್ಞಾನದ ಆಧುನಿಕ ಮೌಲ್ಯಗಳನ್ನು ಈ ಆ್ಯಪ್‌ ಒಳಗೊಂಡಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಸಾಮಾಜಿಕ ಜಾಲತಾಣಗಳ ಮೂಲಕ ಅನಿಸಿಕೆ ಹಂಚಿಕೊಂಡಿದ್ದಾರೆ.

ಟಾಟಾ ಸಮೂಹಕ್ಕೆ ಸೆರಿದ ಬಿಗ್‌ಬಾಸ್ಕೆಟ್, 1ಎಂಜಿ, ಏರ್‌ ಇಂಡಿಯಾ ಆ್ಯಪ್‌ಗಳನ್ನು ಈಗಾಗಲೇ ಬಳಸುತ್ತಿರುವವರು, ಅವುಗಳನ್ನು ತಮ್ಮ ಸ್ಮಾರ್ಟ್‌ಫೋನ್‌ನಿಂದ ಅನ್‌ಇನ್‌ಸ್ಟಾಲ್ ಮಾಡಿ, ನಿಯು ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಳ್ಳಬೇಕೇ ಅಥವಾ ಈ ಆ್ಯಪ್‌ಗಳು ಹೊಸ ನಿಯು ಜೊತೆ ಸ್ವಯಂಚಾಲಿತವಾಗಿ ವಿಲೀನ ಆಗುತ್ತವೆಯೇ ಎಂಬುದು ಖಚಿತವಾಗಿಲ್ಲ.

ADVERTISEMENT

ಇ–ವಾಣಿಜ್ಯ ವಲಯದಲ್ಲಿ ದೊಡ್ಡ ಪಾಲು ಹೊಂದುವ ಉದ್ದೇಶ ಇರಿಸಿಕೊಂಡಿರುವ ಟಾಟಾ ಸಮೂಹವು ನಿಯು ಆ್ಯಪ್‌ಅನ್ನು ಒಂದು ವರ್ಷದಿಂದ ಪರೀಕ್ಷೆಗೆ ಒಳ‍ಪಡಿಸಿತ್ತು. ‘ಭಾರತದ ಗ್ರಾಹಕರ ಜೀವನವನ್ನು ಇನ್ನಷ್ಟು ಸರಳವಾಗಿಸುವುದು ಹಾಗೂ ಸುಲಭವಾಗಿಸುವುದು ನಮ್ಮ ಉದ್ದೇಶ’ ಎಂದು ಕೂಡ ಚಂದ್ರಶೇಖರನ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.