ADVERTISEMENT

ಟಾಟಾ ನೆಕ್ಸಾನ್‌, ಟಿಯಾಗೊ ಇ.ವಿ ದರ ಇಳಿಕೆ

ಪಿಟಿಐ
Published 13 ಫೆಬ್ರುವರಿ 2024, 15:19 IST
Last Updated 13 ಫೆಬ್ರುವರಿ 2024, 15:19 IST
<div class="paragraphs"><p>ಟಾಟಾ&nbsp;ನೆಕ್ಸಾನ್‌</p></div>

ಟಾಟಾ ನೆಕ್ಸಾನ್‌

   

ನವದೆಹಲಿ : ಟಾಟಾ ಮೋಟರ್ಸ್‌ನ ಎಲೆಕ್ಟ್ರಿಕ್‌ ವಾಹನಗಳ ಘಟಕವು ನೆಕ್ಸಾನ್‌ ಮತ್ತು ಟಿಯಾಗೊ ಎಲೆಕ್ಟ್ರಿಕ್‌ ಕಾರಿನ ಬೆಲೆಯನ್ನು ಇಳಿಕೆ ಮಾಡಿದೆ. ಗ್ರಾಹಕರಿಗೆ ಬ್ಯಾಟರಿ ಬೆಲೆ ಕಡಿತದ ಮೊತ್ತ ರವಾನಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ. 

ಪ್ರಸ್ತುತ ನೆಕ್ಸಾನ್‌ ಇ.ವಿ ಮಾದರಿಯ ಕಾರಿನ ಬೆಲೆಯಲ್ಲಿ ₹1.2 ಲಕ್ಷ ಕಡಿತ ಮಾಡಿದ್ದು, ₹14.49 ಲಕ್ಷ ಆರಂಭಿಕ ಬೆಲೆಗೆ ದೊರೆಯಲಿದೆ. ಟಿಯಾಗೊ ಇ.ವಿ ಬೆಲೆಯಲ್ಲಿ ₹70 ಸಾವಿರದವರೆಗೆ ಕಡಿತಗೊಳಿಸಲಾಗಿದೆ. ಈ ಕಾರು ₹7.99 ಲಕ್ಷ ಆರಂಭಿಕ ಬೆಲೆಗೆ ದೊರೆಯಲಿದೆ ಎಂದು ತಿಳಿಸಿದೆ.

ADVERTISEMENT

ಆದರೆ, ಇತ್ತೀಚೆಗೆ ಬಿಡುಗಡೆ ಮಾಡಿರುವ ಪಂಚ್‌ ಎಲೆಕ್ಟ್ರಿಕ್‌ ಕಾರಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

‘ಇತ್ತೀಚಿನ ದಿನಗಳಲ್ಲಿ ಬ್ಯಾಟರಿ ಸೆಲ್ ಬೆಲೆ ಕಡಿಮೆಯಾಗುತ್ತಿದೆ. ಹಾಗಾಗಿ, ವಾಹನದ ದರವನ್ನು ಇಳಿಕೆ ಮಾಡುವ ಮೂಲಕ ನೇರವಾಗಿ ಗ್ರಾಹಕರಿಗೆ ಇದರ ಪ್ರಯೋಜನ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿಯ (ಟಿಪಿಇಎಂ) ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್ ಶ್ರೀವತ್ಸ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.