ADVERTISEMENT

250 ಚಾರ್ಜಿಂಗ್‌ ಕೇಂದ್ರ ಸ್ಥಾಪನೆಗೆ ಟಾಟಾ ಮೋಟರ್ಸ್ ನಿರ್ಧಾರ

ಪಿಟಿಐ
Published 21 ಆಗಸ್ಟ್ 2024, 21:00 IST
Last Updated 21 ಆಗಸ್ಟ್ 2024, 21:00 IST
   

ನವದೆಹಲಿ: ಬೆಂಗಳೂರು ಸೇರಿ ದೇಶದ 50ಕ್ಕೂ ಹೆಚ್ಚು ನಗರಗಳಲ್ಲಿ ಹೊಸದಾಗಿ 250 ವಿದ್ಯುತ್‌ಚಾಲಿತ ವಾಣಿಜ್ಯ ವಾಹನಗಳ ಚಾರ್ಜಿಂಗ್‌ ಕೇಂದ್ರ ತೆರೆಯಲು ಟಾಟಾ ಮೋಟರ್ಸ್‌ ನಿರ್ಧರಿಸಿದೆ.

ಅತಿವೇಗದ ಚಾರ್ಜಿಂಗ್‌ ಕೇಂದ್ರಗಳ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಇಂಡಿಯಾ ಮತ್ತು ಥಂಡರ್‌ಪ್ಲಸ್ ಸೆಲ್ಯೂಷನ್ಸ್‌ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಕಂಪನಿಯು ಬುಧವಾರ ತಿಳಿಸಿದೆ. ದೆಹಲಿ, ಮುಂಬೈ, ಚೆನ್ನೈ, ಪುಣೆ, ಕೊಚ್ಚಿ ಸೇರಿ ಪ್ರಮುಖ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಹೊಸ ಕೇಂದ್ರಗಳ ಸ್ಥಾಪನೆಯೊಂದಿಗೆ ಒಟ್ಟು ಚಾರ್ಜಿಂಗ್‌ ಕೇಂದ್ರಗಳ ಸಂಖ್ಯೆ 540ಕ್ಕೆ ತಲುಪಲಿದೆ ಎಂದು ತಿಳಿಸಿದೆ.

ಕೇಂದ್ರಗಳಿಗೆ ಅಗತ್ಯವಿರುವ ಹಾರ್ಡ್‌ವೇರ್‌ಗಳನ್ನು ಡೆಲ್ಟಾ ಎಲೆಕ್ಟ್ರಾನಿಕ್ಸ್‌ ಪೂರೈಸಲಿದೆ. ಥಂಡರ್‌ಪ್ಲಸ್‌ ಸೆಲ್ಯೂಷನ್ಸ್ ಇವುಗಳನ್ನು ಅಳವಡಿಸುವ ಜೊತೆಗೆ ಕಾರ್ಯಾಚರಣೆ ಮಾಡಲಿದೆ ಎಂದು ಹೇಳಿದೆ. 

ADVERTISEMENT

ದೂರದ ಸ್ಥಳಗಳಿಗೆ ಸರಕು ಸಾಗಣೆಗಾಗಿ ಇ–ಕಾಮರ್ಸ್‌ ಕಂಪನಿಗಳು, ಪಾರ್ಸಲ್‌ ಮತ್ತು ಕೊರಿಯರ್‌ ಸೇವಾದಾತರು ಸೇರಿ ಹಲವು ಕಂಪನಿಗಳು ವಿದ್ಯುತ್‌ಚಾಲಿತ ವಾಣಿಜ್ಯ ವಾಹನಗಳನ್ನು ಹೆಚ್ಚಾಗಿ ಬಳಸುತ್ತವೆ. ಅವರಿಗೆ ಈ ಕೇಂದ್ರಗಳಿಂದ ಪ್ರಯೋಜನ ಸಿಗಲಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.