ನವದೆಹಲಿ: ಟಿಯಾಗೊ ಕಾರಿನ ಇ.ವಿ. (ವಿದ್ಯುತ್ ಚಾಲಿತ) ಆವೃತ್ತಿಯನ್ನು ಈ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಟಾಟಾ ಮೋಟರ್ಸ್ ಶುಕ್ರವಾರ ತಿಳಿಸಿದೆ. ಪರಿಸರ ಸ್ನೇಹಿ ವಾಹನಗಳು ಗ್ರಾಹಕರ ಕೈಗೆಟಕುವಂತೆ ಆಗಬೇಕು ಎಂಬ ಉದ್ದೇಶದಿಂದ ಕಂಪನಿ ಈ ಕಾರನ್ನು ಬಿಡುಗಡೆ ಮಾಡಲಿದೆ.
ಟಾಟಾ ಮೋಟರ್ಸ್ ಕಂಪನಿಯು ನೆಕ್ಸಾನ್ ಹಾಗೂ ಟಿಗಾರ್ ಇ.ವಿ. ಆವೃತ್ತಿಗಳನ್ನು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ಒಟ್ಟು 10 ವಿದ್ಯುತ್ ಚಾಲಿತ ವಾಹನ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಗುರಿಯನ್ನು ಕಂಪನಿ ಹೊಂದಿದೆ.
ವಿದ್ಯುತ್ ಚಾಲಿತ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಈಗ ಟಾಟಾ ಮೋಟರ್ಸ್ ಸಿಂಹಪಾಲು (ಶೇಕಡ 88ರಷ್ಟು) ಹೊಂದಿದೆ. ‘ಟಾಟಾ ಮೋಟರ್ಸ್‌ನ 40 ಸಾವಿರ ವಿದ್ಯುತ್ ಚಾಲಿತ ವಾಹನಗಳು ಗ್ರಾಹಕರ ಬಳಿ ಈಗಾಗಲೇ ಇವೆ’ ಎಂದು ಕಂಪನಿಯ ಪ್ರಯಾಣಿಕ ವಾಹನ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ಚಂದ್ರ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.