ADVERTISEMENT

1 ಸಾವಿರ ಬಸ್‌ ಚಾಸಿಸ್‌ ಪೂರೈಕೆಗೆ ಕಾರ್ಯಾದೇಶ ಪಡೆದ ಟಾಟಾ ಮೋಟರ್ಸ್‌

ಪಿಟಿಐ
Published 21 ಅಕ್ಟೋಬರ್ 2024, 15:30 IST
Last Updated 21 ಅಕ್ಟೋಬರ್ 2024, 15:30 IST
ಟಾಟಾ
ಟಾಟಾ   

ನವದೆಹಲಿ: ಉತ್ತರಪ್ರದೇಶದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ (ಯುಪಿಎಸ್‌ಆರ್‌ಟಿಸಿ) 1 ಸಾವಿರ ಡೀಸೆಲ್‌ ಬಸ್‌ನ ಚಾಸಿಸ್‌ ಪೂರೈಸಲು ಕಾರ್ಯಾದೇಶ ಪಡೆದಿರುವುದಾಗಿ ಟಾಟಾ ಮೋಟರ್ಸ್‌ ಸೋಮವಾರ ತಿಳಿಸಿದೆ.

ಸ್ಪರ್ಧಾತ್ಮಕ ಇ-ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಈ ಕಾರ್ಯಾದೇಶ ಅನ್ನು ಪಡೆದಿದೆ. ನಿಯಮಗಳ ಪ್ರಕಾರ ಬಸ್ ಚಾಸಿಸ್ ಅನ್ನು ಹಂತ ಹಂತವಾಗಿ ಪೂರೈಸಲಾಗುವುದು ಎಂದು ತಿಳಿಸಿದೆ. ಕಳೆದ ವರ್ಷ ಯುಪಿಎಸ್‌ಆರ್‌ಟಿಸಿಯಿಂದ 1,350 ಬಸ್‌ ಚಾಸಿಸ್‌ ಪೂರೈಸುವ ಕಾರ್ಯಾದೇಶ ಪಡೆಯಲಾಗಿತ್ತು ಎಂದು ತಿಳಿಸಿದೆ.

ಸುರಕ್ಷಿತ ಮತ್ತು ದೂರದ ಪ್ರಯಾಣಕ್ಕಾಗಿ ವಿನ್ಯಾಸಗೊಳಿಸಲಾಗಿರುವ ಟಾಟಾ ಎಲ್‌ಪಿಒ 1618 ಡೀಸೆಲ್ ಬಸ್ ಚಾಸಿಯು ಉತ್ತಮ ಕಾರ್ಯಕ್ಷಮತೆ ಹೊಂದಿದೆ. ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಜೊತೆಗೆ ಇದರ ಕಾರ್ಯಾಚರಣೆ ವೆಚ್ಚವೂ ಕಡಿಮೆ ಇದೆ. ಪ್ರಯಾಣಿಕರಿಗೆ ಅನುಕೂಲಕರವಾಗಿ ಪ್ರಯಾಣ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.