ನವದೆಹಲಿ: ಟಾಟಾ ಮೋಟರ್ಸ್ ಕಂಪನಿಯು ಸೋಮವಾರದಿಂದ ಜಾರಿಗೆ ಬರುವಂತೆ ಪ್ರಯಾಣಿಕ ವಾಹನಗಳ ಬೆಲೆಯನ್ನು ಅಲ್ಪ ಹೆಚ್ಚಳ ಮಾಡಿದೆ. ವಿವಿಧ ಮಾದರಿಗಳು ಮತ್ತು ಅವತರಣಿಕೆಗಳಿಗೆ ಅನುಗುಣವಾಗಿ ಸರಾಸರಿ ಬೆಲೆ ಏರಿಕೆಯು ಶೇ 0.9ರಷ್ಟು ಇರಲಿದೆ ಎಂದು ಹೇಳಿದೆ.
ತಯಾರಿಕಾ ವೆಚ್ಚದಲ್ಲಿ ಆಗುತ್ತಿರುವ ಹೆಚ್ಚಳದ ಒಂದಿಷ್ಟು ಭಾಗವನ್ನು ಮಾತ್ರವೇ ಅಲ್ಪ ಬೆಲೆ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಕಂಪನಿಯು ಟಿಯಾಗೊ, ಪಂಚ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿಯಂತಹ ಪ್ರಯಾಣಿಕ ವಾಹನಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.