ನವದೆಹಲಿ: ಟಾಟಾ ಮೋಟರ್ಸ್ ಕಂಪನಿಯು ಶನಿವಾರದಿಂದ ಜಾರಿಗೆ ಬರುವಂತೆ ತನ್ನೆಲ್ಲಾ ಪ್ರಯಾಣಿಕ ವಾಹನಗಳ ಬೆಲೆಯನ್ನು ಶೇ 0.55ರಷ್ಟು ಏರಿಕೆ ಮಾಡಿರುವುದಾಗಿ ತಿಳಿಸಿದೆ.
ತಯಾರಿಕಾ ವೆಚ್ಚ ಹೆಚ್ಚಾಗುತ್ತಿದ್ದು, ಅದನ್ನು ಭಾಗಶಃ ಸರಿದೂಗಿಸುವ ಸಲುವಾಗಿ ಬೆಲೆ ಏರಿಕೆಯ ನಿರ್ಧಾರಕ್ಕೆ ಬರಲಾಗಿದೆ.ವಾಹನಗಳ ವಿವಿಧ ಮಾದರಿಗಳು ಮತ್ತು ಆವೃತ್ತಿಗಳಿಗೆ ಅನುಗುಣವಾಗಿ ಬೆಲೆಯಲ್ಲಿ ಏರಿಕೆ ಆಗಲಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿಯು ಈಗಾಗಲೇ ವಾಣಿಜ್ಯ ವಾಹನಗಳ ಬೆಲೆಯನ್ನು ಶೇ 1.5 ರಿಂದ ಶೇ 2.5ರವರೆಗೆ ಏರಿಕೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.