ಬೆಂಗಳೂರು: ಟಾಟಾ ಮೋಟರ್ಸ್ ಕಂಪನಿಯು ದೇಶದ ಮಾರುಕಟ್ಟೆಗೆ ಹೊಸ ರೂಪದಲ್ಲಿ ಸಫಾರಿ ಮತ್ತು ಹ್ಯಾರಿಯರ್ ಎಸ್‌ಯುವಿಗಳನ್ನು ಬಿಡುಗಡೆ ಮಾಡಿದೆ. ಪರಿಚಯಾತ್ಮಕ ಬೆಲೆ ಕ್ರಮವಾಗಿ ₹16.19 ಲಕ್ಷ ಮತ್ತು ₹ 15.49 ಇದೆ.
ಹೊಸ ವಿನ್ಯಾಸ ಮತ್ತು ಆಧುನಿಕ ತಂತ್ರಜ್ಞಾನಗಳೊಂದಿಗೆ ಈ ಎರಡೂ ಮಾದರಿಗಳು ಚಾಲನಾ ಅನುಭವವನ್ನು ಇನ್ನಷ್ಟು ಸುಧಾರಿಸಲಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಎರಡೂ ಮಾದರಿಗಳು ಜಿಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿವೆ. 7 ಏರ್‌ಬ್ಯಾಗ್, 31.24 ಸಿಎಂ ಹರ್ಮಾನ್ ಟಚ್‌ಸ್ಕ್ರೀನ್ ಎನ್ಫೊಟೇನ್ಮೆಂಟ್ ಸಿಸ್ಟಂ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿವೆ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.