ADVERTISEMENT

ಟಾಟಾ, ಮಹೀಂದ್ರ ಎಸ್‌ಯುವಿ ಕಾರುಗಳ ಬೆಲೆ ಕಡಿತ

ಪಿಟಿಐ
Published 10 ಜುಲೈ 2024, 15:52 IST
Last Updated 10 ಜುಲೈ 2024, 15:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಟಾಟಾ ಮೋಟರ್ಸ್‌ ಮತ್ತು ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ತನ್ನ ಎಸ್‌ಯುವಿ ಕಾರುಗಳ ದರವನ್ನು ಕಡಿತಗೊಳಿಸಿವೆ.

ಮಾರುಕಟ್ಟೆಯಲ್ಲಿ ಈ ಮಾದರಿಯ ಕಾರುಗಳಿಗೆ ಬೇಡಿಕೆ ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿವೆ.

ಟಾಟಾ ಮೋಟರ್ಸ್‌ನ ಹ್ಯಾರಿಯರ್‌ ಮತ್ತು ಸಫಾರಿ ಕಾರಿನ ಪರಿಷ್ಕೃತ ಆರಂಭಿಕ ಬೆಲೆಯು ಕ್ರಮವಾಗಿ ₹14.99 ಲಕ್ಷ ಮತ್ತು ₹15.49 ಲಕ್ಷ ಆಗಿದೆ. ಇತರೆ ಪ್ರಮುಖ ಎಸ್‌ಯುವಿ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ₹1.4 ಲಕ್ಷದವರೆಗೆ ಪ್ರಯೋಜನ ದೊರೆಯಲಿದೆ.  

ADVERTISEMENT

ವಿದ್ಯುತ್‌ಚಾಲಿತ ನೆಕ್ಸಾನ್‌ಗೆ ₹1.3 ಲಕ್ಷ ಮತ್ತು ಪಂಚ್‌ ಕಾರಿಗೆ ₹30 ಸಾವಿರವರೆಗೆ ರಿಯಾಯಿತಿ ಸೌಲಭ್ಯ ದೊರೆಯಲಿದೆ ಎಂದು ಟಾಟಾ ಪ್ಯಾಸೆಂಜರ್‌ನ ಎಲೆಕ್ಟ್ರಿಕ್‌ ಮೊಬಿಲಿಟಿಯ ಮುಖ್ಯ ವಾಣಿಜ್ಯ ಅಧಿಕಾರಿ ವಿವೇಕ್‌ ಶ್ರೀವತ್ಸ ತಿಳಿಸಿದ್ದಾರೆ. 

ಮಹೀಂದ್ರ ಆ್ಯಂಡ್‌ ಮಹೀಂದ್ರದ ಎಕ್ಸ್‌ಯುವಿ700 ಕಾರಿನ ಎಎಕ್ಸ್‌7 ಶ್ರೇಣಿಗೆ  ₹19.49 ಲಕ್ಷ ಆರಂಭಿಕ ಬೆಲೆ ನಿಗದಿಪಡಿಸಲಾಗಿದೆ. ಈ ಕಾರಿನ ಬೆಲೆಯು ₹2 ಲಕ್ಷದಷ್ಟು ಕಡಿತಗೊಂಡಿದೆ.

ಜಾಗ್ವಾರ್‌ ಮಾರಾಟ ಹೆಚ್ಚಳ: ಜಾಗ್ವಾರ್‌ ಲ್ಯಾಂಡ್‌ ರೋವರ್‌ ಇಂಡಿಯಾದ ವಾಹನಗಳ ಚಿಲ್ಲರೆ ಮಾರಾಟವು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌–ಜೂನ್‌) ಶೇ 31ರಷ್ಟು ಏರಿಕೆಯಾಗಿದೆ. ಒಟ್ಟು 1,371 ವಾಹನಗಳು ಮಾರಾಟವಾಗಿವೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.