ADVERTISEMENT

ವ್ಯವಹಾರ ವಿಭಜನೆಗೆ ಟಾಟಾ ತೀರ್ಮಾನ

ಪಿಟಿಐ
Published 5 ಮಾರ್ಚ್ 2024, 15:29 IST
Last Updated 5 ಮಾರ್ಚ್ 2024, 15:29 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

‌ನವದೆಹಲಿ: ಪ್ರಯಾಣಿಕ ವಾಹನ ಮತ್ತು ವಾಣಿಜ್ಯ ವಾಹನ ಉದ್ಯಮಗಳಾಗಿ ಟಾಟಾ ಮೋಟರ್ಸ್‌ ವ್ಯವಹಾರದ ವಿಭಜನೆಗೆ ಕಂಪನಿಯ ಆಡಳಿತ ಮಂಡಳಿಯು ಸೋಮವಾರ ಒಪ್ಪಿಗೆ ನೀಡಿದೆ.

ಮಾರುಕಟ್ಟೆಯಲ್ಲಿನ ಬೆಳವಣಿಗೆಯ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಲು ಈ ನಿರ್ಧಾರ ಕೈಗೊಳ್ಳಲಾಗಿದೆ. ವಾಣಿಜ್ಯ ವಾಹನಗಳ ವ್ಯವಹಾರ ಹಾಗೂ ಅದಕ್ಕೆ ಸಂಬಂಧಿಸಿದ ಹೂಡಿಕೆಯು ಒಂದು ವಿಭಾಗದಲ್ಲಿ ಇರುತ್ತವೆ. ಎಲೆಕ್ಟ್ರಿಕ್‌ ವಾಹನಗಳು, ಜಾಗ್ವಾರ್‌ ಲ್ಯಾಂಡ್‌ ರೋವರ್‌ ಸೇರಿದಂತೆ ಪ್ರಯಾಣಿಕ ವಾಹನಗಳ ವ್ಯವಹಾರ ಹಾಗೂ ಅದಕ್ಕೆ ಸಂಬಂಧಿಸಿದ ಹೂಡಿಕೆಯು ಮತ್ತೊಂದು ವಿಭಾಗದಲ್ಲಿ ಇರುತ್ತದೆ ಎಂದು ಟಾಟಾ ಮೋಟರ್ಸ್‌, ಷೇರುಪೇಟೆಗೆ ತಿಳಿಸಿದೆ.‌

ADVERTISEMENT

ಕಂಪನಿಯ ಈ ತೀರ್ಮಾನಕ್ಕೆ ಷೇರುದಾರರು, ಸಾಲಗಾರರು ಹಾಗೂ ಸೆಬಿ ಅನುಮತಿ ನೀಡಬೇಕಿದೆ. ಹಾಗಾಗಿ, ಈ ಪ್ರಕ್ರಿಯೆ ಪೂರ್ಣಗೊಳ್ಳಲು 15 ತಿಂಗಳು ಬೇಕಿದೆ.

‘ಸದ್ಯ ಮೂರು ಆಟೊಮೋಟಿವ್‌ ವ್ಯವಹಾರ ಘಟಕಗಳು ಸ್ವತಂತ್ರವಾಗಿ ಕಾರ್ಯಾಚರಣೆ ನಡೆಸುತ್ತವೆ. ಇದರಿಂದ ಕಾರ್ಯದಕ್ಷತೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ. ಈ ವಿಭಜನೆಯು ಮಾರುಕಟ್ಟೆಯಲ್ಲಿನ ಅವಕಾಶಗಳನ್ನು ಬಳಸಿಕೊಂಡು ಬಂಡವಾಳ ವೃದ್ಧಿಸಿಕೊಳ್ಳಲು ನೆರವಾಗಲಿದೆ’ ಎಂದು ಟಾಟಾ ಮೋಟರ್ಸ್‌ ಮುಖ್ಯಸ್ಥ ಎನ್‌. ಚಂದ್ರಶೇಖರನ್‌ ಹೇಳಿದ್ದಾರೆ.

ಅಲ್ಲದೆ, ಈ ವಿಭಜನೆಯು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು, ಉದ್ಯೋಗಿಗಳ ಅಭಿವೃದ್ಧಿ ಹಾಗೂ ಷೇರುದಾರರಿಗೆ ಅನುಕೂಲ ಕಲ್ಪಿಸಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.