ADVERTISEMENT

ಟಾಟಾ ಮೋಟರ್ಸ್‌ ಎಂ–ಕ್ಯಾಪ್‌ಗೆ ₹21,074 ಕೋಟಿ ಸೇರ್ಪಡೆ

ಪಿಟಿಐ
Published 25 ಜುಲೈ 2024, 14:30 IST
Last Updated 25 ಜುಲೈ 2024, 14:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಷೇರುಪೇಟೆಯಲ್ಲಿ ಗುರುವಾರ ನಡೆದ ವಹಿವಾಟಿನಲ್ಲಿ ಟಾಟಾ ಮೋಟರ್ಸ್‌ನ ಷೇರಿನ ಮೌಲ್ಯದಲ್ಲಿ ಶೇ 6ರಷ್ಟು ಏರಿಕೆಯಾಗಿದೆ. 

ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆಯು ಕ್ರಮವಾಗಿ ₹1,091 ಮತ್ತು ₹1,089ಕ್ಕೆ ತಲುಪಿದೆ. ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್‌) ಒಂದೇ ದಿನ ₹21,074 ಕೋಟಿ ಸೇರ್ಪಡೆಯಾಗಿದೆ. ಕಂಪನಿಯ ಒಟ್ಟು ಎಂ–ಕ್ಯಾಪ್‌ ₹3.62 ಲಕ್ಷ ಕೋಟಿಗೆ ಮುಟ್ಟಿದೆ.

ಅದಾನಿ ಗ್ರೀನ್‌ ಎನರ್ಜಿ ಷೇರಿನ ಮೌಲ್ಯ ಏರಿಕೆ:

ADVERTISEMENT

2024–25ನೇ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಅದಾನಿ ಗ್ರೀನ್‌ ಎನರ್ಜಿ ಲಿಮಿಟೆಡ್‌ನ ಲಾಭದಲ್ಲಿ ಏರಿಕೆಯಾಗಿರುವುದರಿಂದ ಕಂಪನಿಯ ಷೇರಿನ ಮೌಲ್ಯದಲ್ಲಿ ಶೇ 8ರಷ್ಟು ಏರಿಕೆಯಾಗಿದೆ.

ಕಂಪನಿಯ ಮಾರುಕಟ್ಟೆ ಮೌಲ್ಯಕ್ಕೆ ₹16,584 ಕೋಟಿ ಸೇರ್ಪಡೆಯಾಗಿದ್ದು, ಒಟ್ಟು ಎಂ–ಕ್ಯಾಪ್‌ ₹2.88 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಎಕ್ಸಿಸ್‌ ಬ್ಯಾಂಕ್‌ ಷೇರಿನ ಮೌಲ್ಯ ಇಳಿಕೆ: 

ಜೂನ್‌ ತ್ರೈಮಾಸಿಕದಲ್ಲಿ ಎಕ್ಸಿಸ್‌ ಬ್ಯಾಂಕ್‌ ಹೂಡಿಕೆದಾರರು ನಿರೀಕ್ಷಿಸಿದಷ್ಟು ಲಾಭ ಗಳಿಸಲು ವಿಫಲವಾದ್ದರಿಂದ ಬ್ಯಾಂಕ್‌ನ ಷೇರಿನ ಮೌಲ್ಯ ಶೇ 5ರಷ್ಟು ಇಳಿದಿದೆ. ಇದರಿಂದ ಒಂದೇ ದಿನ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯದಲ್ಲಿ ₹19,816 ಕೋಟಿ ಕರಗಿದ್ದು, ಒಟ್ಟು ಎಂ–ಕ್ಯಾಪ್‌ ₹3.63 ಲಕ್ಷ ಕೋಟಿ ಆಗಿದೆ.

ಸೂಚ್ಯಂಕಗಳು ಇಳಿಕೆ:

ಸತತ ಐದನೇ ದಿನದ ವಹಿವಾಟಿನಲ್ಲೂ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ 109 ಅಂಶ ಇಳಿಕೆಯಾಗಿ, 80,039ಕ್ಕೆ ಸ್ಥಿರಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 7 ಅಂಶ ಕಡಿಮೆಯಾಗಿ, 24,406ಕ್ಕೆ ಅಂತ್ಯಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.