ADVERTISEMENT

ಟಾಟಾ ವಾಹನಗಳ ಬೆಲೆ ಏರಿಕೆ

ಪಿಟಿಐ
Published 18 ಜನವರಿ 2022, 13:16 IST
Last Updated 18 ಜನವರಿ 2022, 13:16 IST
ಟಾಟಾ ಕಂಪನಿಯ ಕಾರು
ಟಾಟಾ ಕಂಪನಿಯ ಕಾರು   

ನವದೆಹಲಿ: ಬುಧವಾರದಿಂದ ಜಾರಿಗೆ ಬರುವಂತೆ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಸರಾಸರಿ ಶೇಕಡ 0.9ರಷ್ಟು ಹೆಚ್ಚಿಸಲಾಗುವುದು ಎಂದು ಟಾಟಾ ಮೋಟರ್ಸ್ ಮಂಗಳವಾರ ತಿಳಿಸಿದೆ. ಕಚ್ಚಾ ವಸ್ತುಗಳ ಬೆಲೆಯಲ್ಲಿ ಏರಿಕೆಆಗಿರುವ ಕಾರಣ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ.

ಮಾದರಿಯಿಂದ ಮಾದರಿಗೆಬೆಲೆ ಹೆಚ್ಚಳದಲ್ಲಿ ವ್ಯತ್ಯಾಸ ಇರಲಿದೆ. ಕೆಲವು ಮಾದರಿಗಳ ಮೇಲಿನ ಬೆಲೆಯನ್ನು ಕಂಪನಿಯು ₹ 10 ಸಾವಿರದವರೆಗೆ ಇಳಿಕೆ ಕೂಡ ಮಾಡಲಿದೆ.

ಜನವರಿ 18ಕ್ಕಿಂತಲೂ ಮೊದಲು ಕಾರು ಬುಕ್ ಮಾಡಿದ್ದರೆ, ಬೆಲೆ ಹೆಚ್ಚಳವು ಅದಕ್ಕೆ ಅನ್ವಯ ಆಗುವುದಿಲ್ಲ. ಮಾರುತಿ ಸುಜುಕಿ ಕಂಪನಿಯು ತನ್ನ ಕಾರುಗಳ ಬೆಲೆಯನ್ನು ಹಿಂದಿನ ವಾರ ಗರಿಷ್ಠ ಶೇ 4.3ರವರೆಗೆ ಹೆಚ್ಚಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.