ನವದೆಹಲಿ: ಟಾಟಾ ಮೋಟರ್ಸ್ ಕಂಪನಿಯು ಮೇ 1 ರಿಂದ ಜಾರಿಗೆ ಬರುವಂತೆ ಪ್ರಯಾಣಿಕ ವಾಹನಗಳ ಬೆಲೆಯನ್ನು ಶೇ 0.6ರವರೆಗೆ ಹೆಚ್ಚಳ ಮಾಡುವುದಾಗಿ ಶುಕ್ರವಾರ ಹೇಳಿದೆ.
ತಯಾರಿಕಾ ವೆಚ್ಚದಲ್ಲಿ ಆಗುತ್ತಿರುವ ಹೆಚ್ಚಳ ಮತ್ತು ಬಿಎಸ್–6ನ ಎರಡನೆಯ ಹಂತದ ನಿಯಮಗಳ ಪಾಲನೆಗೆ ಆಗುತ್ತಿರುವ ವೆಚ್ಚದ ಬಹುಪಾಲನ್ನು ಕಂಪನಿಯೇ ಹೊರುತ್ತಿದೆ. ಅದರಲ್ಲಿ ಒಂದು ಭಾಗವನ್ನು ಬೆಲೆ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿಯು ಫೆಬ್ರುವರಿಯಲ್ಲಿ ಪ್ರಯಾಣಿಕ ವಾಹನಗಳ ಬೆಲೆಯನ್ನು ಶೇ 1.2ರವರೆಗೆ ಹೆಚ್ಚಳ ಮಾಡಿತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.