ADVERTISEMENT

ಟಾಟಾ ‘ನೆಕ್ಸಾನ್‌ ಇವಿ’ ಬಿಡುಗಡೆ

ಪಿಟಿಐ
Published 28 ಜನವರಿ 2020, 19:59 IST
Last Updated 28 ಜನವರಿ 2020, 19:59 IST
ನೆಕ್ಸಾನ್‌ ಇವಿ ಬಿಡುಗಡೆ ಕಾರ್ಯಕ್ರಮದಲ್ಲಿ ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಮತ್ತು ಟಾಟಾ ಸಮೂಹದ ವಿಶ್ರಾಂತ ಅಧ್ಯಕ್ಷ ರತನ್‌ ಟಾಟಾ ಭಾಗವಹಿಸಿದ್ದರು  –ಎಎಫ್‌ಪಿ ಚಿತ್ರ
ನೆಕ್ಸಾನ್‌ ಇವಿ ಬಿಡುಗಡೆ ಕಾರ್ಯಕ್ರಮದಲ್ಲಿ ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ಮತ್ತು ಟಾಟಾ ಸಮೂಹದ ವಿಶ್ರಾಂತ ಅಧ್ಯಕ್ಷ ರತನ್‌ ಟಾಟಾ ಭಾಗವಹಿಸಿದ್ದರು  –ಎಎಫ್‌ಪಿ ಚಿತ್ರ   

ಮುಂಬೈ: ಟಾಟಾ ಮೋಟರ್ಸ್‌ ಕಂಪನಿಯು ತನ್ನ ವಿದ್ಯುತ್‌ ಚಾಲಿತ ಸ್ಪೋರ್ಟ್ಸ್‌ ಯುಟಿಲಿಟಿ ವಾಹನ ನೆಕ್ಸಾನ್‌ ಇವಿ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 13.99 ಲಕ್ಷ ಇದೆ.

ಜಿಪ್ಟ್ರಾನ್‌ ತಂತ್ರಜ್ಞಾನದ ಎಲೆಕ್ಟ್ರಿಕ್‌ ಎಸ್‌ಯುವಿ, ಒಮ್ಮೆ ಪೂರ್ತಿ ಚಾರ್ಜ್‌ ಮಾಡಿದರೆ, 312 ಕಿ.ಮೀ ಚಲಿಸಬಲ್ಲದು. ಇದರಲ್ಲಿ 35 ಬಗೆಯ ಸಂಪರ್ಕ ವೈಶಿಷ್ಟ್ಯಗಳಿವೆ.

ದೇಶದಾದ್ಯಂತ 22 ನಗರಗಳ 60 ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ನೆಕ್ಸಾನ್‌ ಇವಿ ಖರೀದಿಗೆ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

ADVERTISEMENT

‘24 ತಿಂಗಳಿನಲ್ಲಿ ವಿದ್ಯುತ್‌ ಚಾಲಿತ ವಾಹನ ವಿಭಾಗದಲ್ಲಿ ಎರಡು ಎಸ್‌ಯುವಿ, ಒಂದು ಹ್ಯಾಚ್‌ಬ್ಯಾಕ್‌ ಹಾಗೂ ಒಂದು ಸೆಡಾನ್‌ ಬಿಡುಗಡೆ ಮಾಡಲಾಗುವುದು’ ಎಂದು ಟಾಟಾ ಸನ್ಸ್‌ ಅಧ್ಯಕ್ಷ ಎನ್‌. ಚಂದ್ರಶೇಖರನ್‌ ತಿಳಿಸಿದ್ದಾರೆ.

ಮನೆ, ಕಚೇರಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜಿಂಗ್‌ ಸೌಲಭ್ಯಕ್ಕಾಗಿ ಟಾಟಾ ಪವರ್‌ ಕಂಪನಿಯ ಜತೆ
ಒಪ್ಪಂದ ಮಾಡಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.