ನವದೆಹಲಿ: ಕಾಫಿ ಉತ್ಪನ್ನಗಳನ್ನು ಮಾರಾಟ ಮಾಡುವ ಟಾಟಾ ಸ್ಟಾರ್‌ಬಕ್ಸ್ ಆದಾಯದಲ್ಲಿ ಕಳೆದ ಹಣಕಾಸು ವರ್ಷದಲ್ಲಿ ಶೇ 76ರಷ್ಟು ಹೆಚ್ಚಳವಾಗಿದೆ ಎಂದು ಕಂಪನಿ ಹೇಳಿದೆ.
ಒಟ್ಟಾರೆ ನಷ್ಟದಲ್ಲಿ ಭಾರಿ ಇಳಿಕೆಯಾಗಿದ್ದು, ಹೊಸ ಮಳಿಗೆ ಮತ್ತು ಉತ್ಪನ್ನಗಳ ಸೇರ್ಪಡೆಯಿಂದ ಹಾಗೂ ಕೋವಿಡ್ ನಿರ್ಬಂಧ ತೆಗೆದುಹಾಕಿರುವುದರಿಂದ ಆದಾಯದಲ್ಲಿ ಹೆಚ್ಚಳ ಕಂಡುಬಂದಿದೆ ಎಂದು ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಲಿ. ವಾರ್ಷಿಕ ವರದಿಯಲ್ಲಿ ಹೇಳಿದೆ.
2021–22ನೇ ಸಾಲಿನಲ್ಲಿ ಟಾಟಾ ಸ್ಟಾರ್‌ಬಕ್ಸ್ ಎಲ್ಲ ಮಳಿಗೆಗಳಿಂದ ₹636 ಕೋಟಿ ಆದಾಯ ಗಳಿಸಿದೆ ಎಂದು ಕಂಪನಿ ತಿಳಿಸಿದೆ.
ಒಟ್ಟು 26 ನಗರಗಳಲ್ಲಿ 268 ಸ್ಟೋರ್‌ಗಳನ್ನು ಟಾಟಾ ಸ್ಟಾರ್‌ಬಕ್ಸ್ ಹೊಂದಿದೆ. ಕಳೆದ ಹಣಕಾಸು ವರ್ಷವೊಂದರಲ್ಲೇ ದೇಶದ ಪ್ರಮುಖ ತಾಣಗಳಲ್ಲಿ 50 ಹೊಸ ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.