ADVERTISEMENT

ಬೆಲೆ ಏರಿಕೆ ಸುಳಿವು ನೀಡಿದ ಟಾಟಾ ಟೀ

ಪಿಟಿಐ
Published 23 ಅಕ್ಟೋಬರ್ 2024, 16:04 IST
Last Updated 23 ಅಕ್ಟೋಬರ್ 2024, 16:04 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಉತ್ಪಾದನಾ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಟಾಟಾ ಟೀ ತನ್ನ ಎಲ್ಲಾ ಬ್ರ್ಯಾಂಡ್‌ಗಳ ಬೆಲೆಯನ್ನು ಮುಂಬರುವ ತಿಂಗಳುಗಳಲ್ಲಿ ಏರಿಕೆ ಮಾಡಲಾಗುವುದು ಎಂದು ತಿಳಿಸಿದೆ.

‘ಲಾಭ ಹೆಚ್ಚಳದ ಗುರಿ ಹೊಂದಲಾಗಿದೆ. ಹಾಗಾಗಿ, ಬೆಲೆ ಏರಿಕೆಯು ಅನಿವಾರ್ಯವಾಗಿದೆ’ ಎಂದು ಟಾಟಾ ಟೀಯ ಮಾತೃಸಂಸ್ಥೆಯಾದ ಟಾಟಾ ಕನ್ಸೂಮರ್‌ ಪ್ರಾಡೆಕ್ಟ್ಸ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ಎ. ಡಿಸೋಜಾ ತಿಳಿಸಿದ್ದಾರೆ.

2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಕಂಪನಿಯು ಶೇ 1ರಷ್ಟು ನಿವ್ವಳ ಲಾಭಗಳಿಸಿದೆ. ವರಮಾನದಲ್ಲಿ ಶೇ 11ರಷ್ಟು ಏರಿಕೆಯಾಗಿದೆ. ಆದರೆ, ಚಹ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಈ ವರ್ಷ ಚಹ ಬೆಲೆಯಲ್ಲಿ ಶೇ 25ರಷ್ಟು ಏರಿಕೆಯಾಗಿದೆ.

ADVERTISEMENT

‘ಪ್ರತಿ ಹದಿನೈದು ದಿನಕ್ಕೊಮ್ಮೆ ಬೆಲೆ ಏರಿಕೆ ಅನುಷ್ಠಾನಗೊಳ್ಳುತ್ತಿಲ್ಲ. ಪ್ರತಿ ತ್ರೈಮಾಸಿಕದಲ್ಲೂ ಕೆಲವು ಬೆಲೆಗಳು ಏರಿಕೆಯಾಗುತ್ತಿವೆ. ಮುಂದಿನ ಎರಡು ಅಥವಾ ಮೂರು ತಿಂಗಳಿನಲ್ಲಿ ಚಹ ಬೆಲೆಯನ್ನು ಹೆಚ್ಚಿಸಲಾಗುವುದು’ ಎಂದು ಸುನಿಲ್ ತಿಳಿಸಿದ್ದಾರೆ.

‘ದೇಶದಲ್ಲಿ ಚಹಾ ಉತ್ಪಾದನೆಯಲ್ಲಿ ಶೇ 20ರಷ್ಟು ಕುಸಿತವಾಗಿದೆ. ಆದರೆ, ರಫ್ತು ಪ್ರಮಾಣದಲ್ಲಿ ಏರಿಕೆಯಾಗಿದೆ’ ಎಂದು ಹೇಳಿದ್ದಾರೆ.

ದೇಶದ ಚಿಲ್ಲರೆ ಮಾರುಕಟ್ಟೆಯಲ್ಲಿ ಟಾಟಾ ಟೀ ಪಾಲು ಶೇ 28ರಷ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.