ADVERTISEMENT

ಚಿಲ್ಲರೆ ಹೂಡಿಕೆಗೂ ತೆರಿಗೆ ವಿನಾಯ್ತಿ ಸಾಧ್ಯತೆ

ಪಿಟಿಐ
Published 30 ಜೂನ್ 2019, 19:45 IST
Last Updated 30 ಜೂನ್ 2019, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎರಡು ವಿನಿಮಯ ವಹಿವಾಟು ನಿಧಿಗಳಲ್ಲಿ (ಸಿಪಿಎಸ್‌ಇ, ಭಾರತ್‌–22) ಚಿಲ್ಲರೆ ಹೂಡಿಕೆದಾರರಿಗೆ ನೀಡುತ್ತಿರುವ ತೆರಿಗೆ ವಿನಾಯ್ತಿಯನ್ನು ಮುಂದುವರಿಸುವುದನ್ನು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ.

ಸದ್ಯಕ್ಕೆ, ಚಿಲ್ಲರೆ ಹೂಡಿಕೆದಾರರು ಮೂರು ವರ್ಷಗಳ ಅವಧಿಯವರೆಗಿನ ಹೂಡಿಕೆಗೆ ತೆರಿಗೆ ವಿನಾಯ್ತಿಯ ಪ್ರಯೋಜನ ಪಡೆಯುತ್ತಿದ್ದಾರೆ.

ಮ್ಯೂಚುವಲ್‌ ಫಂಡ್‌ನಲ್ಲಿಷೇರು ಸಂಬಂಧಿತ ಉಳಿತಾಯ ಯೋಜನೆಗೆ (ಇಎಲ್‌ಎಸ್‌ಎಸ್‌) ನೀಡುವಂತೆಯೇ, ಚಿಲ್ಲರೆ ಹೂಡಿಕೆದಾರರಿಗೂ ತೆರಿಗೆ ವಿನಾಯ್ತಿ ನೀಡಬಹುದೆ.ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80 ಸಿ ಅಡಿಯಲ್ಲಿ ಇದಕ್ಕೆ ಅವಕಾಶ ಇದೆಯೇ ಎಂದುಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ವಿಭಾಗವು (ಡಿಐಪಿಎಎಂ) ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯ (ಸಿಬಿಡಿಟಿ) ಅಭಿಪ್ರಾಯ ಕೇಳಿದೆ.

ADVERTISEMENT

ಈ ಕುರಿತು ಜುಲೈ 5ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್‌ನಲ್ಲಿ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ಸದ್ಯ ಮ್ಯೂಚುವಲ್‌ ಫಂಡ್‌ನಲ್ಲಿ ‘ಇಎಲ್‌ಎಸ್ಎಸ್‌’ನಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್‌ 80ಸಿ ಅಡಿಯಲ್ಲಿ ₹ 1.50 ಲಕ್ಷದವರೆಗಿನ ಹೂಡಿಕೆಗೆ ತೆರಿಗೆ ಕಡಿತ ಇದೆ. ಆದರೆ ಮೂರು ವರ್ಷಗಳ ಲಾಕ್‌ ಇನ್‌ ಅವಧಿ ಕಡ್ಡಾಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.