ADVERTISEMENT

ಜಿಎಸ್‌ಟಿ: 18 ಸಾವಿರ ನಕಲಿ ಕಂಪನಿ ಪತ್ತೆ

₹25 ಸಾವಿರ ಕೋಟಿ ಜಿಎಸ್‌ಟಿ ವಂಚನೆ ಬಯಲಿಗೆ

ಪಿಟಿಐ
Published 5 ನವೆಂಬರ್ 2024, 14:54 IST
Last Updated 5 ನವೆಂಬರ್ 2024, 14:54 IST
<div class="paragraphs"><p>ಜಿಎಸ್‌ಟಿ&nbsp;&nbsp;</p></div>

ಜಿಎಸ್‌ಟಿ  

   

ನವದೆಹಲಿ: ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್‌ ಮಂಡಳಿಯಿಂದ (ಸಿಬಿಐಸಿ) ದೇಶದಾದ್ಯಂತ ಜಿಎಸ್‌ಟಿ ನಕಲಿ ನೋಂದಣಿ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 18 ಸಾವಿರ ನಕಲಿ ಕಂಪನಿಗಳನ್ನು ಪತ್ತೆ ಹಚ್ಚಲಾಗಿದೆ. ಒಟ್ಟು ₹25 ಸಾವಿರ ಕೋಟಿ ವಂಚನೆ ಬೆಳಕಿಗೆ ಬಂದಿದೆ.

ನಕಲಿ ನೋಂದಣಿ ವಿರುದ್ಧ ಹಮ್ಮಿಕೊಂಡಿರುವ ಈ ಎರಡನೇ ಹಂತದ ವಿಶೇಷ ಕಾರ್ಯಾಚರಣೆಯು ಆಗಸ್ಟ್ 16ರಂದು ಪ್ರಾರಂಭವಾಗಿದ್ದು, ಅಕ್ಟೋಬರ್‌ 15ರ ವರೆಗೆ ನಡೆಯಿತು. 

ADVERTISEMENT

ಸರಕು ಮತ್ತು ಸೇವಾ ತೆರಿಗೆ ಅಡಿ ವರ್ತಕರಿಗೆ ಗುರುತಿನ ಸಂಖ್ಯೆ (ಜಿಎಸ್‌ಟಿಐಎನ್) ನೀಡಲಾಗುತ್ತದೆ. ಒಟ್ಟು 73 ಸಾವಿರ ಜಿಎಸ್‌ಟಿಐಎನ್‌ಗಳನ್ನು ಗುರುತಿಸಲಾಗಿದೆ. ಈ ಪೈಕಿ 18 ಸಾವಿರ ನಕಲಿ ಕಂಪನಿಗಳು, ₹24,550 ಕೋಟಿ ವಂಚನೆ ಮಾಡಿವೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಈ ಕಾರ್ಯಾಚರಣೆ ವೇಳೆ ಸ್ವಯಂಪ್ರೇರಿತವಾಗಿ ಕಂಪನಿಗಳು ₹70 ಕೋಟಿ ಪಾವತಿ ಮಾಡಿವೆ. 

ದೇಶದಲ್ಲಿ ಮೊದಲ ಹಂತದಲ್ಲಿ 2023ರ ಮೇ 16ರಿಂದ ಜುಲೈ 15ರ ವರೆಗೆ ನಕಲಿ ನೋಂದಣಿ ವಿರುದ್ಧ ಕಾರ್ಯಾಚರಣೆ ನಡೆದಿತ್ತು. 21,791 ನಕಲಿ ಕಂಪನಿಗಳನ್ನು ಪತ್ತೆ ಹಚ್ಚಿದ್ದ ತೆರಿಗೆ ಅಧಿಕಾರಿಗಳು, ₹24,010 ಕೋಟಿ ವಂಚನೆಯನ್ನು ಬಯಲಿಗೆ ಎಳೆದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.