ADVERTISEMENT

Tea Export: ಚಹಾ ರಫ್ತು ಶೇ 23ರಷ್ಟು ಏರಿಕೆ

ಪಿಟಿಐ
Published 8 ಅಕ್ಟೋಬರ್ 2024, 15:34 IST
Last Updated 8 ಅಕ್ಟೋಬರ್ 2024, 15:34 IST
ಚಹಾ
ಚಹಾ   

ಕೋಲ್ಕತ್ತ: ಪ್ರಸಕ್ತ ವರ್ಷದ ಜನವರಿ–ಜುಲೈ ಅವಧಿಯಲ್ಲಿ ದೇಶದ ಚಹಾ ರಫ್ತು ಶೇ 23ರಷ್ಟು ಏರಿಕೆಯಾಗಿದೆ ಎಂದು ಚಹಾ ಮಂಡಳಿ ಮಂಗಳವಾರ ತಿಳಿಸಿದೆ. 

2023ರ ಇದೇ ಅವಧಿಯಲ್ಲಿ ಚಹಾ ರಫ್ತು 11.67 ಕೋಟಿ ಟನ್‌ನಷ್ಟಿತ್ತು. ಅದು ಈ ಬಾರಿ 14.45 ಕೋಟಿ ಟನ್‌ಗೆ ಏರಿಕೆಯಾಗಿದೆ. ಪ್ರಸ್ತುತ ಒಂದು ಕೆ.ಜಿ ಚಹಾ ಪುಡಿ ಬೆಲೆ ₹256 ಇದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹264 ಇತ್ತು ಎಂದು ತಿಳಿಸಿದೆ.

ವಾಣಿಜ್ಯ ಸಚಿವಾಲಯವು ಚಹಾ ಉದ್ಯಮದ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ₹664 ಕೋಟಿ ಮೊತ್ತದ ಯೋಜನೆಗೆ ಅನುಮೋದನೆ ನೀಡಿದೆ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

Highlights -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.