ADVERTISEMENT

ಟೆಕ್‌ ಮಹೀಂದ್ರ ಲಾಭ ಶೇ 61ರಷ್ಟು ಇಳಿಕೆ

ಪಿಟಿಐ
Published 25 ಅಕ್ಟೋಬರ್ 2023, 16:20 IST
Last Updated 25 ಅಕ್ಟೋಬರ್ 2023, 16:20 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಟೆಕ್ ಮಹೀಂದ್ರ ಕಂಪನಿಯ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ 61ರಷ್ಟು ಇಳಿಕೆ ಕಂಡು ₹505 ಕೋಟಿಗೆ ತಲುಪಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಲಾಭವು ₹1,299 ಕೋಟಿಯಷ್ಟು ಇತ್ತು.

ಕಾರ್ಯಾಚರಣಾ ವರಮಾನ ಶೇ 2ರಷ್ಟು ಇಳಿಕೆ ಕಂಡು ₹12,864 ಕೋಟಿಗೆ ತಲುಪಿದೆ. ಹಿಂದಿನ ಅವಧಿಯಲ್ಲಿ ₹13,129 ಕೋಟಿಯಷ್ಟು ಇತ್ತು.

ಸಂವಹನ, ಮಾಧ್ಯಮ ಮತ್ತು ಮನರಂಜನೆ ವಿಭಾಗಗಳಲ್ಲಿನ ವಹಿವಾಟು ಶೇ 11.5ರಷ್ಟು ಇಳಿಕೆ ಕಂಡಿದೆ. ಬ್ಯಾಂಕಿಂಗ್‌, ಹಣಕಾಸು ಸೇವೆಗಳು ಮತ್ತು ವಿಮಾ ವಹಿವಾಟು ಶೇ 6.3ರಷ್ಟು ಇಳಿಕೆ ಆಗಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯು ಯುರೋಪ್‌ ವಹಿವಾಟು ಶೇ 8.6ರಷ್ಟು ಮತ್ತು ಇತರ ದೇಶಗಳೊಂದಿಗಿನ ವಹಿವಾಟು ಒಟ್ಟು ಶೇ 11ರಷ್ಟು ಇಳಿಕೆ ಕಂಡಿದೆ ಎಂದು ಹೇಳಿದೆ.

ADVERTISEMENT

ಒಟ್ಟು ಸಿಬ್ಬಂದಿ ಸಂಖ್ಯೆ 1.63 ಲಕ್ಷದಿಂದ 1.50 ಲಕ್ಷಕ್ಕೆ ಶೇ 81.ರಷ್ಟು ಇಳಿಕೆ ಕಂಡಿದೆ. ಕಂಪನಿ ತೊರೆಯುತ್ತಿರುವವರ ಪ್ರಮಾಣವು ಶೇ 20ರಿಂದ ಶೇ 11ಕ್ಕೆ ಇಳಿಕೆ ಕಂಡಿರುವುದಾಗಿ ಅದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.