ADVERTISEMENT

ದೇಶದ ಜವಳಿ, ಸಿದ್ಧ ಉಡುಪು ರಫ್ತು ಹೆಚ್ಚಳ: ಸಿಐಟಿಐ

ಪಿಟಿಐ
Published 15 ಆಗಸ್ಟ್ 2024, 15:38 IST
Last Updated 15 ಆಗಸ್ಟ್ 2024, 15:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುಂಬೈ: ಜುಲೈ ತಿಂಗಳಲ್ಲಿ ದೇಶದ ಜವಳಿ ಮತ್ತು ಸಿದ್ಧ ಉಡುಪುಗಳ ರಫ್ತು ಪ್ರಮಾಣವು ಶೇ 4.73ರಷ್ಟು ಏರಿಕೆಯಾಗಿದೆ ಎಂದು ಭಾರತೀಯ ಜವಳಿ ಉದ್ಯಮ ಒಕ್ಕೂಟ (ಸಿಐಟಿಐ) ಗುರುವಾರ ತಿಳಿಸಿದೆ.

2023ರ ಜುಲೈನಲ್ಲಿ ₹23.55 ಕೋಟಿ ಮೌಲ್ಯದಷ್ಟು ಜವಳಿ ಮತ್ತು ಸಿದ್ಧ ಉಡುಪುಗಳ ರಫ್ತಾಗಿತ್ತು. ಈಗ ₹24.65 ಕೋಟಿಯಷ್ಟು ರಫ್ತಾಗಿದೆ ಎಂದು ತಿಳಿಸಿದೆ.

ಸಿದ್ಧ ಉಡುಪು ರಫ್ತು ₹10.72 ಕೋಟಿಯಷ್ಟಾಗಿದ್ದು, ಶೇ 11ರಷ್ಟು ಏರಿಕೆಯಾಗಿದೆ. ಜವಳಿ ರಫ್ತು ಪ್ರಮಾಣದ ಮೌಲ್ಯವು ₹13.93 ಕೋಟಿಯಾಗಿದೆ ಎಂದು ತಿಳಿಸಿದೆ.

ADVERTISEMENT

‘ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಬ್ರಿಟನ್‌ನಲ್ಲಿ ದೇಶದ ಸಿದ್ಧ ಉಡುಪುಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ರಫ್ತು ಪ್ರಮಾಣದಲ್ಲಿ ಏರಿಕೆಯಾಗಿದೆ’ ಎಂದು ಸಿಐಟಿಐ ಅಧ್ಯಕ್ಷ ರಾಕೇಶ್‌ ಮೆಹ್ರಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.