ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಪಾವತಿಗಳಿಗೆ ಯಾವುದೇ ಶುಲ್ಕ ವಿಧಿಸುವ ಪ್ರಸ್ತಾಪ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ.
ಈ ಕುರಿತು ಕೇಂದ್ರ ಹಣಕಾಸು ಇಲಾಖೆಯ ಅಧಿಕೃತ ಖಾತೆಯಲ್ಲಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಲಾಗಿದೆ.
ಯುಪಿಐ ಡಿಜಿಟಲ್ ಪಾವತಿ ವ್ಯವಸ್ಥೆಯು ಸಾರ್ವಜನಿಕರಿಗೆ ಅಪಾರ ಅನುಕೂಲ ಹಾಗೂ ಉತ್ಪಾದಕತೆ ಲಾಭವನ್ನುಂಟು ಮಾಡುತ್ತದೆ. ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸುವ ಪ್ರಸ್ತಾಪ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂದು ಹೇಳಿದೆ.
ಕಳೆದ ವರ್ಷ ಡಿಜಿಟಲ್ ಪಾವತಿ ವ್ಯವಸ್ಥೆಗೆ ಸರ್ಕಾರ ಹಣಕಾಸಿನ ನೆರವನ್ನು ನೀಡಿತು. ಪ್ರಸಕ್ತ ಸಾಲಿನಲ್ಲೂಬಳಕೆದಾರ ಸ್ನೇಹಿ ಡಿಜಿಟಲ್ ಪಾವತಿ ಉತ್ತೇಜಿಸಲು ಮತ್ತಷ್ಟು ನೆರವನ್ನು ಘೋಷಣೆ ಮಾಡಲಾಯಿತು ಎಂದು ಉಲ್ಲೇಖಿಸಿದೆ.
ಇವನ್ನೂ ಓದಿ:
ಆರ್ಬಿಐ: ಯುಪಿಐ ವಹಿವಾಟಿಗೆ ಶುಲ್ಕ?
ಯುಪಿಐಗೆ ಕ್ರೆಡಿಟ್ ಕಾರ್ಡ್: ಆರ್ಬಿಐ ಒಪ್ಪಿಗೆ
ಕ್ರೆಡಿಟ್ ಕಾರ್ಡ್ನಿಂದ ಯುಪಿಐ ಮೂಲಕವೂ ಪಾವತಿ: ಆರ್ಬಿಐ ಪ್ರಸ್ತಾವನೆ
ಡಿಜಿಟಲ್ ಪಾವತಿ ಸೇವೆ: ಸಿಹಿ ಸುದ್ದಿ ಕೊಟ್ಟ ವಾಟ್ಸ್ಆ್ಯಪ್ !
ಪೇಟಿಎಂ, ಗೂಗಲ್ ಪೇ, ಫೋನ್ ಪೇ, ಯುಪಿಐ, ವಾಲೆಟ್: ಏನು ವ್ಯತ್ಯಾಸ? ಇಲ್ಲಿದೆ ಮಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.