ADVERTISEMENT

ಬಾಸ್ಮತಿ ಅಕ್ಕಿ ರಫ್ತು ದರ ಬದಲಿಲ್ಲ: ಪ್ರತಿ ಟನ್‌ಗೆ ₹99,600 ಎಂಇಪಿ– ಕೇಂದ್ರ

ರಾಯಿಟರ್ಸ್
Published 14 ಅಕ್ಟೋಬರ್ 2023, 20:14 IST
Last Updated 14 ಅಕ್ಟೋಬರ್ 2023, 20:14 IST
ಬಾಸ್ಮತಿ ಅಕ್ಕಿ
ಬಾಸ್ಮತಿ ಅಕ್ಕಿ   

ನವದೆಹಲಿ: ಬಾಸ್ಮತಿ ಅಕ್ಕಿಗೆ ನಿಗದಿ ಮಾಡಿರುವ ಕನಿಷ್ಠ ರಫ್ತು ದರ (ಎಂಇಪಿ) ಬದಲಾವಣೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.

ಪ್ರೀಮಿಯಂ ಬಾಸ್ಮತಿ ಅಕ್ಕಿ ಬದಲಾಗಿ ಬಾಸ್ಮತಿ ಅಲ್ಲದ ಅಕ್ಕಿಯನ್ನು ಅಕ್ರಮವಾಗಿ ರಫ್ತು ಮಾಡುವ ಸಾಧ್ಯತೆಯನ್ನು ತಡೆಯಲು ಪ್ರತಿ ಟನ್‌ಗೆ 1,200 ಡಾಲರ್‌ (₹99,600) ರಫ್ತು ದರವನ್ನು ನಿಗದಿಪಡಿಸಿ ಆಗಸ್ಟ್‌ನಲ್ಲಿ ಸರ್ಕಾರ ಆದೇಶಿಸಿತ್ತು. ಇದರಿಂದಾಗಿ ವಿದೇಶಿ ಮಾರಾಟದಲ್ಲಿ ಭಾರಿ ಇಳಿಕೆ ಕಂಡುಬಂದಿದೆ ಎಂದು ಮಿಲ್‌ಗಳು ಮತ್ತು ವ್ಯಾಪಾರಿಗಳು ದೂರಿದ್ದಾರೆ. ಹೀಗಾಗಿ ಸರ್ಕಾರವು ಪ್ರತಿ ಟನ್‌ಗೆ 850 ಡಾಲರ್‌ಗೆ (₹70,550) ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಈ ಹಿಂದೆ ಹೇಳಿದ್ದವು. ಆದರೆ, ಸದ್ಯಕ್ಕೆ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧಾರ ಮಾಡಿರುವುದಾಗಿ ಸರ್ಕಾರ ಶನಿವಾರ ತಿಳಿಸಿದೆ.

ಭಾರತವು 2022–23ರಲ್ಲಿ ₹39,360 ಕೋಟಿ ಮೌಲ್ಯದ ಬಾಸ್ಮತಿ
ಅಕ್ಕಿ ರಫ್ತು ಮಾಡಿದೆ. 2022–23ರಲ್ಲಿ
ಬಾಸ್ಮತಿ ಹೊರತುಪಡಿಸಿ ಇತರ ಬಗೆಯ ಅಕ್ಕಿ ರಫ್ತು ಮೌಲ್ಯವು ₹54,366 ಕೋಟಿ ಆಗಿತ್ತು. ಕೃಷಿ ಸಚಿವಾಲಯದ ಮಾಹಿತಿಯ ಪ್ರಕಾರ, ಅಕ್ಕಿ ಉತ್ಪಾದನೆಯು 2021–22ರ ಬೆಳೆ ವರ್ಷದಲ್ಲಿ 12.94 ಕೋಟಿ ಟನ್‌ನಷ್ಟು ಇತ್ತು. ಇದು 2022–23ರ ಬೆಳೆ ವರ್ಷಕ್ಕೆ 13.55 ಕೋಟಿ ಟನ್‌ಗೆ ಏರಿಕೆ ಆಗಿರುವ ಅಂದಾಜು ಮಾಡಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.