ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ ಹೊಸದಾಗಿ 3 ಕೋಟಿ ಖಾತೆಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
2014ರ ಆಗಸ್ಟ್ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು, ಈ ಯೋಜನೆಗೆ ಚಾಲನೆ ನೀಡಿದ್ದು, ಹತ್ತು ವರ್ಷ ಸಂದಿದೆ.
2015ರ ಮಾರ್ಚ್ ಅಂತ್ಯಕ್ಕೆ 14.72 ಕೋಟಿ ಇದ್ದ ಬ್ಯಾಂಕ್ ಖಾತೆಗಳಲ್ಲಿ ₹15,670 ಕೋಟಿ ಠೇವಣಿ ಇತ್ತು. ಪ್ರಸಕ್ತ ವರ್ಷದ ಆಗಸ್ಟ್ 16ರ ಅಂತ್ಯಕ್ಕೆ 53.13 ಕೋಟಿ ಖಾತೆಗಳಿದ್ದು, ಠೇವಣಿ ಮೊತ್ತ ₹2.31 ಲಕ್ಷ ಕೋಟಿ ದಾಟಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.