ADVERTISEMENT

ಉತ್ತರ ಪ್ರದೇಶದಲ್ಲಿ ಕೆ.ಜಿ ಟೊಮೆಟೊ ₹250ಕ್ಕೆ ಏರಿಕೆ

ಪಿಟಿಐ
Published 15 ಜುಲೈ 2023, 16:03 IST
Last Updated 15 ಜುಲೈ 2023, 16:03 IST
ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ವಹಿವಾಟು
ಕೋಲಾರ ಎಪಿಎಂಸಿಯಲ್ಲಿ ಟೊಮೆಟೊ ವಹಿವಾಟು   

ನವದೆಹಲಿ: ದೇಶದಾದ್ಯಂತ ಟೊಮೆಟೊ ದರವು ಏರಿಕೆ ಕಾಣುತ್ತಲೇ ಇದೆ. ಉತ್ತರ ಪ್ರದೇಶದ ಹಪುರ್‌ನಲ್ಲಿ ಟೊಮೆಟೊ ರಿಟೇಲ್‌ ಮಾರಾಟ ದರವು ಕೆ.ಜಿಗೆ ಗರಿಷ್ಠ ₹250ಕ್ಕೆ ತಲುಪಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಂಗ್ರಹಿಸಿರುವ ಮಾಹಿತಿಯ ಪ್ರಕಾರ, ಶನಿವಾರ ಸರಾಸರಿ ರಿಟೇಲ್‌ ಮಾರಾಟ ದರ ಕೆ.ಜಿಗೆ ₹116.86 ಆಗಿದೆ. ಕೆ.ಜಿಗೆ ಗರಿಷ್ಠ ದರ ₹250 ಮತ್ತು ಕನಿಷ್ಠ ದರ ₹25ರಂತೆ ಮಾರಾಟ ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT