ನವದೆಹಲಿ: ಫ್ರಾನ್ಸ್‌ನ ಟೋಟಲ್ ಎನರ್ಜೀಸ್ ಕಂಪನಿಯು ಶುದ್ಧ ಇಂಧನಕ್ಕೆ ಸಂಬಂಧಿಸಿದ ಅದಾನಿ ಸಮೂಹದೊಂದಿಗಿನ ಜಂಟಿ ಸಂಸ್ಥೆ ‘ಎಜಿಎಲ್23ಎಲ್’ನಲ್ಲಿ ₹2488 ಕೋಟಿ ಹೂಡಿಕೆ ಮಾಡಲಿದೆ.
ಟೋಟಲ್ ಕಂಪನಿಯು ಈ ಜಂಟಿ ಸಂಸ್ಥೆಯಲ್ಲಿ ಶೇ 50ರಷ್ಟು ಷೇರುಪಾಲು ಹೊಂದಲಿದ್ದು, ಇನ್ನುಳಿದ ಶೇ 50ರಷ್ಟನ್ನು ಅದಾನಿ ಗ್ರೀನ್ ಎನರ್ಜಿ ಲಿಮಿಟಡ್ ಹೊಂದಲಿದೆ ಎಂದು ಎರಡೂ ಕಂಪನಿಗಳು ಪ್ರಕಟಣೆಯಲ್ಲಿ ತಿಳಿಸಿವೆ.
1,050 ಮೆಗಾವಾಟ್ ಸಾಮರ್ಥ್ಯದ ಸೋಲಾರ್ ಮತ್ತು ಪವನ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವನ್ನು ಈ ಜಂಟಿ ಸಂಸ್ಥೆ ಹೊಂದಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.