ADVERTISEMENT

ಟೊಯೊಟಾ ವಾಹನ ಬೆಲೆ ಶೇ 2.5 ಹೆಚ್ಚಳ

ಪಿಟಿಐ
Published 5 ಜನವರಿ 2024, 15:54 IST
Last Updated 5 ಜನವರಿ 2024, 15:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಆಯ್ದ ಮಾದರಿಯ ವಾಹನಗಳ ಮೇಲೆ ಶೇ 0.5ರಿಂದ ಶೇ 2.5ರ ವರೆಗೆ ಬೆಲೆ ಹೆಚ್ಚಿಸಲಾಗಿದೆ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟರ್‌ ಶುಕ್ರವಾರ ತಿಳಿಸಿದೆ.

ಉತ್ಪಾದನಾ ವೆಚ್ಚದ ಹೆಚ್ಚಳದಿಂದಾಗಿ ದರ ಏರಿಕೆ ಅನಿವಾರ್ಯವಾಗಿದೆ. ಈ ಬೆಲೆ ಹೊಂದಾಣಿಕೆಯು ಗ್ರಾಹಕರ ಮೇಲೆ ಕನಿಷ್ಠ ಪರಿಣಾಮ ಬೀರಲಿದೆ. ಬೆಲೆ ಏರಿಕೆಯು ಜನವರಿ 1ರಿಂದಲೇ ಜಾರಿಗೆ ಬರಲಿದೆ ಎಂದು ಕಂಪನಿ ತಿಳಿಸಿದೆ.

ಮಾರುತಿ ಸುಜುಕಿ, ಹುಂಡೈ, ಟಾಟಾ ಮೋಟರ್ಸ್‌ ಸೇರಿದಂತೆ ಪ್ರಯಾಣಿಕ ವಾಹನ ತಯಾರಕರು ಜನವರಿಯಿಂದ ಬೆಲೆ ಏರಿಕೆ ಮಾಡುವುದಾಗಿ ಈಗಾಗಲೇ ಘೋಷಿಸಿವೆ.

ADVERTISEMENT

ಔಡಿ ಕಾರು ಮಾರಾಟ ಏರಿಕೆ:‌ ದೇಶದಲ್ಲಿ ಔಡಿ ಕಾರುಗಳ ಚಿಲ್ಲರೆ ಮಾರಾಟವು 2023ರಲ್ಲಿ ಶೇ 89ರಷ್ಟು ಬೆಳವಣಿಗೆ ಕಂಡಿದ್ದು, ಒಟ್ಟು 7,931 ಕಾರುಗಳು ಮಾರಾಟವಾಗಿವೆ. 2022ರಲ್ಲಿ ಒಟ್ಟು 4,187 ಕಾರುಗಳು ಮಾರಾಟವಾಗಿದ್ದವು ಎಂದು ಕಂಪನಿ ತಿಳಿಸಿದೆ.

ಎ4, ಎ6 ಮತ್ತು ಕ್ಯು5 ವಾಹನಗಳಿಗೆ ಹೆಚ್ಚಿದ ಬೇಡಿಕೆ ಸೇರಿದಂತೆ ವಿವಿಧ ಮಾದರಿಯ ಕಾರುಗಳಿಗೂ ಹೆಚ್ಚಿನ ಬೇಡಿಕೆ ಕಂಡುಬಂದಿರುವುದೇ ಈ ಮಾರಾಟ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕಂಪನಿ ತಿಳಿಸಿದೆ.

ವೊಲ್ವೋ ಕಾರು ಮಾರಾಟ ಏರಿಕೆ: ದೇಶದಲ್ಲಿ ವೊಲ್ವೋ ಕಾರುಗಳ ಮಾರಾಟವು 2023ರಲ್ಲಿ ಶೇ 31ರಷ್ಟು ಹೆಚ್ಚಾಗಿದೆ. ಒಟ್ಟು 2,423 ಕಾರುಗಳು ಮಾರಾಟವಾಗಿವೆ. 2022ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ 1,851 ಕಾರುಗಳ ಮಾರಾಟವಾಗಿತ್ತು ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.