ADVERTISEMENT

ಮೇ 1ರಿಂದ ಅರ್ಬನ್‌ ಕ್ರೂಸರ್‌, ಗ್ಲಾನ್ಸಾ ಬೆಲೆ ಏರಿಕೆ: ಟೊಯೋಟ

ಪಿಟಿಐ
Published 29 ಏಪ್ರಿಲ್ 2022, 11:17 IST
Last Updated 29 ಏಪ್ರಿಲ್ 2022, 11:17 IST
   

ನವದೆಹಲಿ: ಟೊಯೋಟ ಕಿರ್ಲೋಸ್ಕರ್‌ ಮೋಟರ್‌ ಕಂಪನಿಯು ತನ್ನ ಕಾಂಪ್ಯಾಕ್ಟ್‌ ಎಸ್‌ಯುವಿ ಅರ್ಬನ್‌ ಕ್ರೂಸರ್‌ ಮತ್ತು ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಗ್ಲಾನ್ಜಾ ಬೆಲೆಯನ್ನು ಮೇ 1ರಿಂದ ಹೆಚ್ಚಿಸುವುದಾಗಿ ಶುಕ್ರವಾರ ತಿಳಿಸಿದೆ.

ತಯಾರಿಕಾ ವೆಚ್ಚದಲ್ಲಿ ಆಗುತ್ತಿರುವ ಹೆಚ್ಚಳವನ್ನು ಸರಿಹೊಂದಿಸಲು ಈ ನಿರ್ಧಾರಕ್ಕೆ ಬಂದಿರುವುದಾಗಿ ಅದು ಹೇಳಿದೆ.

ಸದ್ಯ ಅರ್ಬನ್‌ ಕ್ರೂಸರ್‌ ಬೆಲೆ ₹ 8.88 ಲಕ್ಷದಿಂದ ₹ 11.58 ಲಕ್ಷದವರೆಗೆ ಇದೆ. ಗ್ಲಾನ್ಸಾ ಬೆಲೆ ₹ 6.39 ಲಕ್ಷದಿಂದ ₹ 9.96 ಲಕ್ಷದವರೆಗೆ ಇದೆ (ದೆಹಲಿ ಎಕ್ಸ್‌ ಷೋರೂಂ).

ADVERTISEMENT

ಉಕ್ಕು, ಅಲ್ಯುಮಿನಿಯಂ ಮತ್ತು ಇತರ ಲೋಹಗಳ ಹಾಗೂ ಇತರ ಕಚ್ಚಾ ಸಾಮಗ್ರಿಗಳ ಬೆಲೆಯಲ್ಲಿ ಭಾರಿ ಹೆಚ್ಚಳ ಆಗಿದ್ದು, ವಾಹನ ತಯಾರಿಕಾ ವೆಚ್ಚದಲ್ಲಿ ಏರಿಕೆಗೆ ಕಾರಣವಾಗಿದೆ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.