ADVERTISEMENT

ಸಗಟು ವಾಹನ ಮಾರಾಟ ಏರಿಕೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 15:39 IST
Last Updated 1 ಮೇ 2024, 15:39 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಟೊಯೊಟ, ಟಿವಿಎಸ್‌, ಟಾಟಾ ಮೋಟರ್ಸ್‌, ಹುಂಡೈ, ಮಾರುತಿ ಸುಜುಕಿ ವಾಹನಗಳ ಸಗಟು ಮಾರಾಟವು ಏಪ್ರಿಲ್‌ನಲ್ಲಿ ಏರಿಕೆಯಾಗಿದೆ. ಆದರೆ, ವಿಇಸಿವಿ ಮತ್ತು ಎಂ.ಜಿ ಮೋಟರ್‌ ವಾಹನಗಳ ಮಾರಾಟದಲ್ಲಿ ಇಳಿಕೆಯಾಗಿದೆ.

ಮಾರುಕಟ್ಟೆಗೆ ಹೊಸ ಮಾದರಿಯ ವಾಹನಗಳ ಬಿಡುಗಡೆ ಹಾಗೂ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಾಹನಗಳನ್ನು ತಯಾರಿಸುತ್ತಿರುವುದೇ ಮಾರಾಟದಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಕಂಪನಿಗಳು ತಿಳಿಸಿವೆ.

ಟೊಯೊಟ ಮಾರಾಟ ಶೇ 32ರಷ್ಟು ಹೆಚ್ಚಳ: ಟೊಯೊಟ ಕಿರ್ಲೋಸ್ಕರ್‌ ಮೋಟರ್‌ನ 20,494 ವಾಹನಗಳು ಮಾರಾಟವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 15,510 ಮಾರಾಟವಾಗಿದ್ದವು. ಇದಕ್ಕೆ ಹೋಲಿಸಿದರೆ ಶೇ 32ರಷ್ಟು ಏರಿಕೆಯಾಗಿದೆ. ದೇಶೀಯವಾಗಿ 18,700 ಮಾರಾಟವಾಗಿದ್ದರೆ, 1,794 ವಾಹನಗಳು ರಫ್ತಾಗಿವೆ.

ADVERTISEMENT

3.83 ಲಕ್ಷ ಟಿವಿಎಸ್‌ ಮಾರಾಟ: ಟಿವಿಎಸ್‌ ಮೋಟರ್‌ ವಾಹನಗಳ ಮಾರಾಟದಲ್ಲಿ ಶೇ 25ರಷ್ಟು ಏರಿಕೆ ಆಗಿದೆ. 3.83 ಲಕ್ಷ ವಾಹನಗಳು ಮಾರಾಟವಾಗಿವೆ. ದ್ವಿಚಕ್ರವಾಹನ ವಿಭಾಗದಲ್ಲಿ 3.74 ಲಕ್ಷ ಮಾರಾಟವಾಗಿವೆ. ತ್ರಿಚಕ್ರ ವಾಹನ ಮಾರಾಟವು 11,438ರಿಂದ 9,023ಕ್ಕೆ ಇಳಿದಿದೆ.

ಟಾಟಾ ಮೋಟರ್ಸ್‌: ಟಾಟಾ ಮೋಟರ್ಸ್‌ನ 77,521 ವಾಹನಗಳು ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 69,599 ಮಾರಾಟವಾಗಿದ್ದವು. ಇದಕ್ಕೆ ಹೋಲಿಸಿದರೆ  ಮಾರಾಟದಲ್ಲಿ ಶೇ 11.5ರಷ್ಟು ಏರಿಕೆ ಆಗಿದೆ. ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ 2ರಷ್ಟು ಏರಿಕೆ ಆಗಿದ್ದು, 47,983 ಮಾರಾಟವಾಗಿವೆ. ವಾಣಿಜ್ಯ ವಾಹನ ಮಾರಾಟದಲ್ಲಿ ಶೇ 31ರಷ್ಟು ಹೆಚ್ಚಳವಾಗಿದೆ. ಒಟ್ಟು 29,538 ವಾಹನಗಳು ಮಾರಾಟವಾಗಿವೆ.

ಹುಂಡೈ ಮಾರಾಟ ಏರಿಕೆ: ಹುಂಡೈ ಮೋಟರ್‌ ಇಂಡಿಯಾ ವಾಹನಗಳ ಮಾರಾಟದಲ್ಲಿ ಶೇ 9.5ರಷ್ಟು ಹೆಚ್ಚಳವಾಗಿದ್ದು, 63,701 ಮಾರಾಟವಾಗಿವೆ. ದೇಶೀಯವಾಗಿ 50,201 ವಾಹನ ಮಾರಾಟವಾಗಿವೆ.

ಮಾರುತಿ ಸುಜುಕಿ: ‌ಮಾರುತಿ ಸುಜುಕಿ ಇಂಡಿಯಾದ 1.68 ಲಕ್ಷ ವಾಹನಗಳು ಮಾರಾಟವಾಗಿವೆ. ಹಿಂದಿನ ಇದೇ ಅವಧಿಯಲ್ಲಿ 1.60 ಲಕ್ಷ ಮಾರಾಟವಾಗಿದ್ದವು. ಇದಕ್ಕೆ ಹೋಲಿಸಿದರೆ ಶೇ 5ರಷ್ಟು ಏರಿಕೆಯಾಗಿವೆ.

ವಿಇಸಿವಿ ಮಾರಾಟ ಶೇ 18ರಷ್ಟು ಕುಸಿತ: ಐಷರ್ ಮೋಟರ್ಸ್‌ನ ಅಂಗಸಂಸ್ಥೆಯಾದ ವಿಇಸಿವಿ ವಾಹನಗಳ ಮಾರಾಟವು ಶೇ 18ರಷ್ಟು ಕುಸಿತವಾಗಿದೆ. ವಾಣಿಜ್ಯ ವಾಹನವು ಮಾರಾಟದಲ್ಲಿ ಏರಿಕೆಯಾಗಿದೆ.

ಎಂ.ಜಿ ಮೋಟರ್‌ ಇಂಡಿಯಾದ ವಾಹನಗಳ ಚಿಲ್ಲರೆ ಮಾರಾಟವು ಶೇ 1.45ರಷ್ಟು ಕುಸಿದಿದ್ದು, 4,485 ವಾಹನಗಳು ಮಾರಾಟವಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.