ADVERTISEMENT

ಕಾರ್ಮಿಕ ಸಂಹಿತೆಗಳಿಗೆ ಸಂಘಟನೆಗಳ ವಿರೋಧ

ಪಿಟಿಐ
Published 20 ಜನವರಿ 2021, 15:38 IST
Last Updated 20 ಜನವರಿ 2021, 15:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನವನ್ನು ಕೇಂದ್ರ ಸರ್ಕಾರವು ತಡೆಹಿಡಿಯಬೇಕು ಎಂದು ಒಟ್ಟು 10 ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ. ಈ ಸಂಹಿತೆಗಳ ವಿಚಾರವಾಗಿ ಹೊಸದಾಗಿ ಚರ್ಚೆಗಳನ್ನು ಆರಂಭಿಸಬೇಕು ಎಂದು ಅವು ಹೇಳಿವೆ.

‘ಪ್ರತಿ ಸಂಹಿತೆಯ ಬಗ್ಗೆಯೂ ಕೇಂದ್ರವು ಕಾರ್ಮಿಕ ಸಂಘಟನೆಗಳ ಜೊತೆ ಹೊಸದಾಗಿ ಚರ್ಚೆ ನಡೆಸಬೇಕು’ ಎಂದು ಅವು ಒತ್ತಾಯಿಸಿವೆ. ಈ ವಿಚಾರವಾಗಿ ಸಂಘಟನೆಗಳು ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ಅವರಿಗೆ ಪತ್ರ ಬರೆದಿವೆ. ಕಾರ್ಮಿಕ ಸಚಿವಾಲಯವು ಈ ಸಂಹಿತೆಗಳ ಅಡಿಯಲ್ಲಿ ನಿಯಮಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಇದೆ.

ಈ ತಿಂಗಳ ಅಂತ್ಯದೊಳಗೆ ನಿಯಮಗಳನ್ನು ಅಂತಿಮಗೊಳಿಸುವ ಉದ್ದೇಶ ಸಚಿವಾಲಯದ್ದು. ಒಟ್ಟು 40 ಕಾರ್ಮಿಕ ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಹಿತೆಯ ಮಟ್ಟಕ್ಕೆ ತಗ್ಗಿಸಿರುವುದನ್ನು ಕಾರ್ಮಿಕ ಸಂಘಟನೆಗಳು ಈಗಾಗಲೇ ವಿರೋಧಿಸಿವೆ ಎಂದು ಕೂಡ ಅವು ಹೇಳಿವೆ.

ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ, ಗುತ್ತಿಗೆ ಆಧಾರಿತ ಕಾರ್ಮಿಕರಿಗೂ ರಕ್ಷಣೆ ಕಲ್ಪಿಸಬೇಕು ಎಂದು ಆರ್‌ಎಸ್‌ಎಸ್‌ನ ಕಾರ್ಮಿಕ ಸಂಘಟನೆಯಾಗಿರುವ ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಪ್ರತ್ಯೇಕ ಹೇಳಿಕೆಯೊಂದರಲ್ಲಿ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.