ನವದೆಹಲಿ: ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಖಾಸಗೀಕರಣ ಹಾಗೂ ಇತರ ಕೆಲವು ‘ಜನವಿರೋಧಿ ನೀತಿ’ಗಳನ್ನು ವಿರೋಧಿಸಿ ಬುಧವಾರ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಒಟ್ಟು ಹತ್ತು ಕಾರ್ಮಿಕ ಸಂಘಟನೆಗಳು ಹೇಳಿವೆ.
ಕಾರ್ಮಿಕ ಸಂಹಿತೆಯನ್ನು ತಿರಸ್ಕರಿಸುವಂತೆ ಒತ್ತಾಯಿಸುವುದು, ಬಡ ಕಾರ್ಮಿಕರ ಕುಟುಂಬಗಳಿಗೆ ಆಹಾರ ಹಾಗೂ ಆದಾಯದ ನೆರವು ನೀಡಬೇಕು ಎಂದು ಆಗ್ರಹಿಸುವುದು ಕೂಡ ಪ್ರತಿಭಟನೆಯ ಭಾಗವಾಗಿರುತ್ತದೆ ಎಂದು ಅವು ಹೇಳಿವೆ. ಪ್ರತಿಭಟನೆಯ ಭಾಗವಾಗಿ ಕಾರ್ಮಿಕ ಸಂಹಿತೆಯ ಪ್ರತಿಗಳನ್ನು ಸುಡಲಾಗುವುದು ಎಂದು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.