ADVERTISEMENT

ಟಿವಿಎಸ್‌ ಜುಪಿಟರ್ 110 ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 16:05 IST
Last Updated 27 ಆಗಸ್ಟ್ 2024, 16:05 IST
ಟಿವಿಎಸ್‌ ಮೋಟರ್ ಕಂಪನಿಯ ಕಾರ್ಪೊರೇಟ್ ಬ್ರ್ಯಾಂಡ್‌ ಮತ್ತು ಮೀಡಿಯಾ ವಿಭಾಗದ ಮುಖ್ಯಸ್ಥ ಅನಿರುದ್ಧ ಹಲ್ದಾರ್ ಅವರು, ಹೊಸ ‘ಟಿವಿಎಸ್ ಜುಪಿಟರ್ 110’ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು
ಟಿವಿಎಸ್‌ ಮೋಟರ್ ಕಂಪನಿಯ ಕಾರ್ಪೊರೇಟ್ ಬ್ರ್ಯಾಂಡ್‌ ಮತ್ತು ಮೀಡಿಯಾ ವಿಭಾಗದ ಮುಖ್ಯಸ್ಥ ಅನಿರುದ್ಧ ಹಲ್ದಾರ್ ಅವರು, ಹೊಸ ‘ಟಿವಿಎಸ್ ಜುಪಿಟರ್ 110’ ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು   

ಬೆಂಗಳೂರು: ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್‌ ಮೋಟರ್‌, ತನ್ನ ಹೊಸ ‘ಟಿವಿಎಸ್ ಜುಪಿಟರ್ 110’ ಅನ್ನು ನಗರದಲ್ಲಿ ಸೋಮವಾರ ಬಿಡುಗಡೆ ಮಾಡಿದೆ.

ವೈಶಿಷ್ಟ್ಯವೇನು?: ಟಿವಿಎಸ್ ಜುಪಿಟರ್ 110 ಸ್ಕೂಟರ್ 113.3 ಸಿಸಿ, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಎಂಜಿನ್‌ ಹೊಂದಿದೆ. ಜುಪಿಟರ್‌ನ ಹಳೆಯ ಮಾದರಿಗಳಿಗೆ ಹೋಲಿಸಿದರೆ ಶೇ 10ರಷ್ಟು ಹೆಚ್ಚು ಮೈಲೇಜ್ ನೀಡುತ್ತದೆ.

ಎರಡು ಫುಲ್ ಹೆಲ್ಮೆಟ್ ಇಡುವಷ್ಟು ಸ್ಥಳಾವಕಾಶ, ಉದ್ದವಾದ ಸೀಟ್‌, ಮುಂಭಾಗದಲ್ಲಿಯೇ ಇಂಧನ ತುಂಬುವ ಸ್ಥಳ, ಮೆಟಲ್ ಮ್ಯಾಕ್ಸ್ ಬಾಡಿ, ಫಾಲೋ ಮೀ ಹೆಡ್‌ ಲ್ಯಾಂಪ್‌ಗಳು, ಟರ್ನ್ ಸಿಗ್ನಲ್ ಲ್ಯಾಂಪ್ ರೆಸ್ಟ್, ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್ ಫೀಚರ್, ವಾಯ್ಸ್ ಅಸಿಸ್ಟ್ ಮೂಲಕ ನ್ಯಾವಿಗೇಶನ್, ಫೈಂಡ್ ಮೀ ವೆಹಿಕಲ್, ಕಾಲ್ ಮತ್ತು ಎಸ್ಎಂಎಸ್ ಮಾಡಬಹುದಾದ ಆಕರ್ಷಕ ಫೀಚರ್‌ ಒದಗಿಸುವ ಬ್ಲೂಟೂತ್‌ನಿಂದ ಕಾರ್ಯ ನಿರ್ವಹಿಸುವ ಸಂಪೂರ್ಣ ಡಿಜಿಟಲ್ ಕ್ಲಸ್ಟರ್ ಹೊಂದಿದೆ.

ADVERTISEMENT

ಬಣ್ಣ ಮತ್ತು ದರ: 

ಡಾನ್ ಬ್ಲೂ ಮ್ಯಾಟ್, ಗ್ಯಾಲಕ್ಟಿಕ್ ಕಾಪರ್ ಮ್ಯಾಟ್, ಟೈಟಾನಿಯಂ ಗ್ರೇ ಮ್ಯಾಟ್, ಸ್ಟಾರ್‌ಲೈಟ್ ಬ್ಲೂ ಗ್ಲಾಸ್, ಲೂನಾರ್ ವೈಟ್ ಗ್ಲಾಸ್ ಮತ್ತು ಮೆಟಿಯರ್ ರೆಡ್ ಗ್ಲೋಸ್ ಎಂಬ ಆರು ಬಣ್ಣಗಳ ಪ್ಯಾಲೆಟ್‌ ಜೊತೆಗೆ ಲಭ್ಯವಿದೆ. ಕರ್ನಾಟಕದಲ್ಲಿ ಈ ಸ್ಕೂಟರ್‌ನ ಆರಂಭಿಕ ಬೆಲೆ ₹77,400 ಇದೆ.

‘ಟಿವಿಎಸ್ ಜುಪಿಟರ್ 110 ವರ್ಷದಿಂದ ಟಿವಿಎಸ್ ಮೋಟರ್ ಸ್ಕೂಟರ್ ವಿಭಾಗವನ್ನು ಮುಂಚೂಣಿಯಲ್ಲಿ ನಿಲ್ಲಿಸಿದೆ. ಜ್ಯಾದಾ ಕಾ ಫಾಯ್ದಾ (ಹೆಚ್ಚು ಸಿಗುವುದರ ಲಾಭ) ಎಂಬ ಘೋಷವಾಕ್ಯ ಹೊಂದಿರುವ ಜುಪಿಟರ್ ಈಗ ಹೊಸ ಜುಪಿಟರ್ ರೂಪದಲ್ಲಿ ಬಿಡುಗಡೆಯಾಗಿದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಹೆಚ್ಚು ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ, ಹೆಚ್ಚು ಇಂಧನ ದಕ್ಷತೆ ನೀಡುವ ಸಾಮರ್ಥ್ಯ ಹೊಂದಿದೆ’ ಎಂದು ಕಂಪನಿಯ ಕಾರ್ಪೊರೇಟ್ ಬ್ರ್ಯಾಂಡ್‌ ಮತ್ತು ಮೀಡಿಯಾ ವಿಭಾಗದ ಮುಖ್ಯಸ್ಥ, ಕಮ್ಯುಟರ್ ಬಿಸಿನೆಸ್ ಮುಖ್ಯಸ್ಥ, ಹಿರಿಯ ಉಪಾಧ್ಯಕ್ಷ ಅನಿರುದ್ಧ ಹಲ್ದಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.