ADVERTISEMENT

ಟಿವಿಎಸ್: ದಾಖಲೆ ಆದಾಯ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 15:55 IST
Last Updated 7 ಫೆಬ್ರುವರಿ 2022, 15:55 IST

ಬೆಂಗಳೂರು: ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಟಿವಿಎಸ್ ಕಂಪನಿಯು ₹5,706 ಕೋಟಿ ಕಾರ್ಯಾಚರಣೆ ಆದಾಯ ಗಳಿಸಿದೆ. ಇದು ಕಂಪನಿ ಕಂಡಿರುವ ಅತಿಹೆಚ್ಚಿನ ಆದಾಯ. ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ₹ 5,391 ಕೋಟಿ ಆದಾಯ ಕಂಡಿತ್ತು.

ಈ ವರ್ಷದ ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ತೆರಿಗೆ ನಂತರದ ಲಾಭವು ಹಿಂದಿನ ವರ್ಷದ ಡಿಸೆಂಬರ್ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ 9ರಷ್ಟು ಹೆಚ್ಚಳವಾಗಿದ್ದು, ₹288 ಕೋಟಿಗೆ ತಲುಪಿದೆ.

ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು 8.35 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ ಎಂದು ಪ್ರಕಟಣೆ ತಿಳಿಸಿದೆ. ಕಂಪನಿಯ ದ್ವಿಚಕ್ರ ವಾಹನಗಳ ರಫ್ತು ಪ್ರಮಾಣವು ಶೇ 12ರಷ್ಟು ಬೆಳವಣಿಗೆ ಸಾಧಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.