ಬೆಂಗಳೂರು: ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್ ಮೋಟರ್ಸ್‌ನ ಮಾರ್ಚ್ ತ್ರೈಮಾಸಿಕದ ಕಾರ್ಯಾಚರಣೆ ವರಮಾನವು ಶೇಕಡ 4ರಷ್ಟು ಹೆಚ್ಚಾಗಿ, ₹ 5,530 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಇದು ₹ 5,322 ಕೋಟಿ ಆಗಿತ್ತು.
2022ರ ಮಾರ್ಚ್ ತ್ರೈಮಾಸಿಕದ ತೆರಿಗೆ ಪೂರ್ವದ ಲಾಭವು ₹ 387 ಕೋಟಿ ಆಗಿದೆ. ತೆರಿಗೆ ನಂತರದ ಲಾಭವು ₹ 275 ಕೋಟಿ ಆಗಿದೆ ಎಂದು ಪ್ರಕಟಣೆ ತಿಳಿಸಿದೆ.
ಸುದರ್ಶನ್ ವೇಣು ಅವರನ್ನು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ. ಕಂಪನಿಯ ಆಡಳಿತ ಮಂಡಳಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ‘ಸುದರ್ಶನ್ ಅವರ ನಾಯಕತ್ವದಲ್ಲಿ ಕಂಪನಿಯು ಜಾಗತಿಕವಾಗಿಯೂ ಮುಂಚೂಣಿ ಸ್ಥಾನವನ್ನು ಪಡೆಯಲಿದೆ ಎಂಬ ವಿಶ್ವಾಸ ಇದೆ’ ಎಂದು ಕಂಪನಿಯ ಗೌರವಾಧ್ಯಕ್ಷ ವೇಣು ಶ್ರೀನಿವಾಸನ್ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.