ADVERTISEMENT

‘ಕೂ’ ಆ್ಯಪ್‌ನ ಖಾತೆ ರದ್ದು ಮಾಡಿದ ಟ್ವಿಟರ್!

ಟ್ವಿಟರ್‌ ನಿರ್ಧಾರಕ್ಕೆ ಕೂ ಸಂಸ್ಥಾಪಕ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2022, 5:27 IST
Last Updated 17 ಡಿಸೆಂಬರ್ 2022, 5:27 IST
   

ವಾಷಿಂಗ್ಟನ್‌: ದಿಗ್ಗಜ ಮಾಧ್ಯಮ ಸಂಸ್ಥೆಗಳ ಪತ್ರಕರ್ತರ ಖಾತೆಗಳನ್ನು ರದ್ದು ಮಾಡಿದ ಬೆನ್ನಲ್ಲೇ ಇದೀಗ, ಭಾರತದ ಮೈಕ್ರೋಬ್ಲಾಗಿಂಗ್ ಸೈಟ್‌ ‘ಕೂ‘ ಆ್ಯಪ್‌ನ ಖಾತೆಯನ್ನು ಟ್ವಿಟರ್‌ ಅಮಾನತು ಮಾಡಿದೆ.

ಬಳಕೆದಾರರ ಸಮಸ್ಯೆಗಳನ್ನು ಆಲಿಸಲು ಟ್ವಿಟರ್‌ನಲ್ಲಿದ್ದ ‘ಕೂ‘ ಆ್ಯಪ್‌ನ @kooeminence ಎನ್ನುವ ಖಾತೆಯನ್ನು ಶುಕ್ರವಾರ ರದ್ದು ಮಾಡಲಾಗಿದೆ.

ಟ್ವಿಟರ್‌ನ ಈ ವರ್ತನೆಗೆ ಕೂ ಆ್ಯಪ್‌ನ ಸಹ ಸಂಸ್ಥಾಪಕ ಮಾಯಾಂಕ್‌ ಬಿದವಟ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನನಗೆ ಮರೆತು ಹೋಗಿತ್ತು. ಇನ್ನೂ ಇದೆ. ಮಸ್ಟೋಡೋನ್ (ಟ್ವಿಟರ್‌ನ ಪ್ರತಿಸ್ಪರ್ಧಿ) ಲಿಂಕ್‌ಗಳು ಸುರಕ್ಷಿತವಲ್ಲ ಎಂದು ಅದರ ಖಾತೆಯನ್ನು ನಿಷ್ಕ್ರೀಯಗೊಳಿಸಲಾಯ್ತು. ಇದೀಗ ಕೂ ನ ಖಾತೆಯನ್ನು ರದ್ದು ಮಾಡಲಾಗಿದೆ. ನಿಜವಾಗಿಯೂ ನಿಮಗೆ ಎಷ್ಟು ನಿಯಂತ್ರಣ ಬೇಕು?‘ ಎಂದು ಪ್ರಶ್ನೆ ಮಾಡಿದ್ದಾರೆ.

ಕೂ ಆ್ಯಪ್‌ ಬಳಸಲು ಉದ್ದೇಶಿಸುವ ವಿಐಪಿಗಳು, ಸೆಲೆಬ್ರೆಟಿಗಳು ತಮಗೆ ಏನಾದರೂ ಗೊಂದಲು ಇದ್ದರೆ, ಪರಿಹರಿಸಿಕೊಳ್ಳಲು ಈ ಖಾತೆಯನ್ನು ಕೆಲ ದಿನಗಳ ಹಿಂದಷ್ಟೇ ತೆರಯಲಾಗಿತ್ತು.

ಸಂಭಾಷಣೆಗೆ ಇದ್ದ ವೇದಿಕೆಯನ್ನು ಟ್ವಿಟರ್ ರಾತ್ರೋ ರಾತ್ರಿ ಕೊಂದು ಹಾಕಿದೆ ಎಂದು ಮಾಯಾಂಕ್ ಕಿಡಿ ಕಾರಿದ್ದಾರೆ. ಅಲ್ಲದೇ ಹಿಂದಿನ ವಾರ ಟ್ವಿಟರ್‌ ಮಾಡಿದ ಕೆಲವು ಕೆಲಸಗಳು ಸರಿ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.