ಬೆಂಗಳೂರು: ಎಂಎಸ್‌ಎಂಇ ವಲಯಕ್ಕೆ ಸಾಲ ನೀಡುವುದನ್ನು ಆದ್ಯತೆಯಾಗಿಸಿಕೊಂಡಿರುವ ಬ್ಯಾಂಕೇತರ ಹಣಕಾಸು ಸಂಸ್ಥೆ (ಎನ್‌ಬಿಎಫ್‌ಸಿ) ಯು ಗ್ರೊ ಕ್ಯಾಪಿಟಲ್, ಪ್ರಸಕ್ತ ಹಣಕಾಸು ವರ್ಷದಲ್ಲಿ ನೀಡುವ ಸಾಲದ ಪ್ರಮಾಣವನ್ನು ದುಪ್ಪಟ್ಟು ಮಾಡುವ ಗುರಿ ಹೊಂದಿದೆ.
ಈ ಹಣಕಾಸು ವರ್ಷದ ಅಂತ್ಯಕ್ಕೆ ಮೊದಲು ದೇಶದಾದ್ಯಂತ 25 ಸಾವಿರ ಅತಿಸಣ್ಣ ಉದ್ದಿಮೆಗಳಿಗೆ ಸಾಲವನ್ನು ನೀಡುವ ಗುರಿಯನ್ನು ಯು ಗ್ರೊ ಕ್ಯಾಪಿಟಲ್ ಕಂಪನಿ ಹೊಂದಿದೆ. ಕರ್ನಾಟಕದ ಮೂರು ಸಾವಿರ ಸಣ್ಣ ಉದ್ದಿಮೆಗಳಿಗೆ ಸಾಲ ಒದಗಿಸುವ ಉದ್ದೇಶವನ್ನು ಕೂಡ ಕಂಪನಿ ಹೊಂದಿದೆ.
ಯು ಗ್ರೊ ಕಂಪನಿಯು ₹10 ಲಕ್ಷದವರೆಗೆ ಅಡಮಾನ ಇಲ್ಲದ ಸಾಲವನ್ನು ನೀಡುತ್ತದೆ. ಅಡಮಾನ ಪಡೆದುಕೊಂಡು ₹25 ಲಕ್ಷದವರೆಗೆ ಸಾಲ ನೀಡುತ್ತದೆ. ವಾರ್ಷಿಕ ₹50 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ಉದ್ದಿಮೆಗಳಿಗೆ ಈ ಸಾಲ ನೀಡಲಾಗುತ್ತದೆ.
ಆರ್‌ಬಿಐ ಈಚೆಗೆ ನೀಡಿರುವ ಅಂಕಿ–ಅಂಶಗಳ ಪ್ರಕಾರ, ದೇಶದ ವಾಣಿಜ್ಯ ಬ್ಯಾಂಕ್‌ಗಳು ಅತಿಸಣ್ಣ, ಸಣ್ಣ ಹಾಗೂ ಮಧ್ಯಮ (ಎಂಎಸ್‌ಎಂಇ) ವಲಯದ ಉದ್ಯಮಗಳಿಗೆ ನೀಡುವ ಸಾಲದ ಪ್ರಮಾಣವು ಹೊಸ ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ ಕಡಿಮೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.