ನ್ಯೂಯಾರ್ಕ್: ಕೆಲ ತಿಂಗಳ ಹಿಂದೆ ಅಮೆರಿಕದ ನ್ಯೂಯಾರ್ಕ್‌ನಲ್ಲಿಆಯ್ದ ಗ್ರಾಹಕರಿಗಷ್ಟೇ ಹೆಲಿಕಾಪ್ಟರ್ ಸೇವೆ ನೀಡಿದ್ದ ಕ್ಯಾಬ್ ಸಂಸ್ಥೆ ಉಬರ್ ಗುರುವಾರ ಅದನ್ನು ಎಲ್ಲ ಗ್ರಾಹರಿಗೂ ವಿಸ್ತರಿಸಿದೆ.
ಅಮೆರಿಕದ ಮ್ಯಾನ್‌ಹಟನ್ ಪಟ್ಟಣದಿಂದ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣನದ ನಡುವೆ ಮಾತ್ರ ಗ್ರಾಹಕರಿಗೆ ಈ ಸೇವೆ ಲಭ್ಯವಾಗಲಿದೆ. 8 ನಿಮಿಷಗಳ ಅಂತರದಲ್ಲಿ ಗ್ರಾಹರಕು ಮ್ಯಾನ್‌ಹಟ್ಟನ್‌ನಿಂದ ವಿಮಾನ ನಿಲ್ದಾಣಕ್ಕೆ ತಲುಪಬಹುದು. ಪ್ರಯಾಣಿಕರು ತಮ್ಮೊಂದಿಗೆ ಸೂಟ್‌ಕೇಸ್‌ವೊಂದನ್ನು ಒಯ್ಯಲು ಅವಕಾಶ ಮಾಡಿಕೊಡಲಾಗಿದೆ. ಕ್ಯಾಪ್ಟರ್ ಏರುವುದಕ್ಕೂ ಮೊದಲು ಸುರಕ್ಷತೆಗೆ ಸಂಬಂಧಿಸಿದಂತೆ ವಿಡಿಯೊವೊಂದನ್ನು ಪ್ರಯಾಣಿಕರಿಗೆ ತೋರಿಸಲಾಗುತ್ತದೆ.
ಈ ಸೇವೆ ಮನೆ ಬಾಗಿಲಿಗೆ ಸಿಗುವುದಿಲ್ಲ. ಹೆಲಿಕಾಪ್ಟರ್ ಬುಕ್ ಮಾಡಿದವರನ್ನು ಕ್ಯಾಬ್ ಮೂಲಕ ಮ್ಯಾನ್‌ಹಟ್ಟನ್‌ಗೆ ಒಯ್ಯಲಾಗುತ್ತದೆ. ನಂತರ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ಮೂಲಕ ಕರೆದೊಯ್ಯಲಾಗುತ್ತದೆ. ಅಲ್ಲಿ ಇಳಿದ ಮೇಲೆ ವಿಮಾನ ನಿಲ್ದಾಣದ ಟರ್ಮಿನಲ್ ತಲುಪಲು ಮತ್ತೊಂದು ಕ್ಯಾಬ್ ವ್ಯವಸ್ಥೆ ಮಾಡಲಾಗುತ್ತದೆ. ಈ ಇಷ್ಟು ಸೇವೆಗೆ ಪ್ರಯಾಣಿಕರು 200–225 ಡಾಲರ್ ನೀಡಬೇಕಾಗುತ್ತದೆ.
ಹೆಲಿಕಾಪ್ಟರ್ ಕ್ಯಾಬ್ ಸೋಮವಾರದಿಂದ ಶುಕ್ರವಾರದ ವೆರೆಗೆ ಮಾತ್ರ ಲಭ್ಯವಿರಲಿದ್ದು, ಬೇಡಿಕೆ ಆಧಾರದಲ್ಲಿ ಪ್ರಯಾಣ ದರವೂ ಹೆಚ್ಚು–ಕಡಿಮೆಯಾಗಲಿದೆ.
2023ರ ಹೊತ್ತಿಗೆ ಉಬರ್ ಸಂಸ್ಥೆಯುಏರ್‌ಟ್ಯಾಕ್ಸಿ ಸೇವೆಯಲ್ಲಿ ಸಂಪೂರ್ಣವಾಗಿ ತೊಡಿಗಿಸಿಕೊಳ್ಳಲು ಯೋಜನೆ ರೂಪಿಸುತ್ತಿದ್ದು, ಸದ್ಯ ಆರಂಭವಾಗಿರುವ ಹೆಲಿಕಾಪ್ಟರ್ ಸೇವೆಯ ಮೂಲಕ ಅದು ಮುಂದಿನ ತನ್ನ ಯೋಜನೆಗೆ ಮಾಹಿತಿ ಕಲೆ ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.
‘ವಾಯುಯಾನ ಆರಂಭಿಸುವುದರತ್ತ ಉಬರ್‌ನ ಮೊದಲ ಹೆಜ್ಜೆ ಇದು,’ ಎಂದು ಉಬರ್ ಎಲಿವೆಟ್‌ನ ಮುಖ್ಯಸ್ಥ ಎರಿಕ್ ಅಲಿಸನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.