ನವದೆಹಲಿ: ವಾಟ್ಸ್‌ಆ್ಯಪ್ ಮೂಲಕವೂ ಉಬರ್ ಆಟೊ, ಕಾರು ಬುಕ್ ಮಾಡಲು ಅನುಕೂಲ ಆಗುವಂತೆ ಉಬರ್ ಮತ್ತು ವಾಟ್ಸ್‌ಆ್ಯಪ್ ಕಂಪನಿಗಳು ಪಾಲುದಾರಿಕೆ ಮಾಡಿಕೊಂಡಿವೆ. ಪ್ರಾಥಮಿಕ ಹಂತದಲ್ಲಿ ಲಖನೌ ನಗರದ ಉತ್ತರ ಭಾಗದಲ್ಲಿ ಇದನ್ನು ಜಾರಿಗೊಳಿಸಲಾಗುವುದು, ಆ ಬಳಿಕ ದೇಶದ ಇತರ ನಗರಗಳಿಗೂ ವಿಸ್ತರಿಸಲಾಗುವುದು ಎಂದು ಕಂಪನಿಗಳು ಹೇಳಿವೆ.
ಈ ಪಾಲುದಾರಿಕೆಯಿಂದಾಗಿ ಗ್ರಾಹಕರು ಉಬರ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ. ಎಲ್ಲ ಪ್ರಕ್ರಿಯೆಗಳೂ ವಾಟ್ಸ್ಆ್ಯಪ್ ಚಾಟ್ ವ್ಯವಸ್ಥೆಯ ಮೂಲಕವೇ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಬುಕಿಂಗ್ ಹೇಗೆ?: ಉಬರ್ ಬಿಸಿನೆಸ್ ಅಕೌಂಟ್ ನಂಬರ್‌ಗೆ ವಾಟ್ಸ್‌ಆ್ಯಪ್‌ನಿಂದ ಮೆಸೇಜ್ ಕಳುಹಿಸುವುದು; ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವುದು ಅಥವಾ ಉಬರ್ ವಾಟ್ಸ್‌ಆ್ಯಪ್ ಚಾಟ್ ತೆರೆಯಲು ಲಿಂಕ್ ಮೇಲೆ ಕ್ಲಿಕ್ ಮಾಡುವುದು... ಹೀಗೆ ಮೂರು ರೀತಿಯಲ್ಲಿವಾಟ್ಸ್‌ಆ್ಯಪ್ ಮೂಲಕ ಉಬರ್ ವಾಹನವನ್ನು ಬುಕ್ ಮಾಡಬಹುದು. ಆ ಬಳಿಕ, ಗ್ರಾಹಕರು ವಾಹನ ಹತ್ತುವ ಮತ್ತು ಇಳಿಯುವ ಸ್ಥಳದ ಲೊಕೇಷನ್ ನೀಡಬೇಕು. ಆಗ ಮುಂಗಡ ದರ ಮತ್ತು ಚಾಲಕ ಬರಲಿರುವ ಸಮಯದ ಮಾಹಿತಿಯುಬಳಕೆದಾರರಿಗೆ ಲಭ್ಯವಾಗಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.