ADVERTISEMENT

ಉಜ್ವಲ: ಮನೆ ಬಾಗಿಲಿಗೆ ಸಿಲಿಂಡರ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 19:38 IST
Last Updated 7 ಏಪ್ರಿಲ್ 2020, 19:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಪ್ರಧಾನಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಎಲ್ಲ ಬಳಕೆದಾರರಿಗೆ ಏಪ್ರಿಲ್‌ನಿಂದ ಜೂನ್‌ವರೆಗೆ ಮೂರು ಎಲ್‌ಪಿಜಿ (ಅಡುಗೆ ಅನಿಲ) ರೀಫಿಲ್‌ ಸಿಲಿಂಡರ್‌ ಗಳನ್ನು ಗ್ರಾಹಕರ ಮನೆ ಬಾಗಿಲಿಗೇ ಉಚಿತವಾಗಿ ವಿತರಿಸಲಾಗುವುದು. ಯಾರೂ ಕಚೇರಿ ಬಳಿ ಬರುವ ಅಗತ್ಯ ಇಲ್ಲ’ ಎಂದು ಇಂಡಿಯನ್‌ ಆಯಿಲ್‌ ಕಂಪನಿಯ (ಐಒಸಿ) ಉಪ ಮಹಾಪ್ರಬಂಧಕ ನೂರಾನ ಅವರು ತಿಳಿಸಿದ್ದಾರೆ.

ಸಿಲಿಂಡರ್‌ ಖರೀದಿ ವೆಚ್ಚ ಭರಿಸಲು ಚಿಲ್ಲರೆ ಮಾರಾಟದ ಮೊತ್ತವನ್ನು ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸಲಾಗು
ವುದು.ಹಣ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಬಗ್ಗೆ ಗ್ರಾಹಕರು ದೃಢೀಕರಣದ ಎಸ್ಎಂಎಸ್ ಪಡೆಯಲಿದ್ದಾರೆ.

ಸಿಲಿಂಡರ್‌ನ ನಗದು ಮೆಮೊದಲ್ಲಿಯೇ ರೀಫಿಲ್‌ ಸಿಲಿಂಡರ್ ಸ್ವೀಕೃತಿಯನ್ನು ಸೇರಿಸಲಾಗಿದೆ. ಗ್ರಾಹಕರು ಐವಿಆರ್‌ಎಸ್ / ಎಸ್‌ಎಂಎಸ್ ಮೂಲಕ ಸಿಲಿಂಡರ್‌ ಗಳನ್ನು ಬುಕ್ ಮಾಡಬಹುದು, ಯಾವುದೇ ದೂರವಾಣಿ ಸಂಖ್ಯೆಯಿಂದಲಾದರೂ ಐವಿಆರ್‌ಎಸ್ ಮೂಲಕ ಮತ್ತು ವಾಟ್ಸ್‌ಆ್ಯಪ್‌/ಪೇಟಿಎಂ/ ಆನ್‌ಲೈನ್ ಇತ್ಯಾದಿಗಳ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು. ಉಜ್ವಲ ಉಚಿತ ರೀಫಿಲ್‌ ಸಿಲಿಂಡರ್ ಯೋಜನೆ ಅಡಿಯಲ್ಲಿ ಪ್ರಯೋಜನ ಪಡೆಯಲು ನಿಯಮಿತವಾದ ಗ್ರಾಹಕರಿಗೆ ಯಾವುದೇ ಹೆಚ್ಚುವರಿ ದಾಖಲೆ ಅಥವಾ ಪ್ರತಿಗಳನ್ನು ಸಲ್ಲಿಸುವ ಅಗತ್ಯಇರುವುದಿಲ್ಲ.

ADVERTISEMENT

ಒಂದೊಮ್ಮೆ ಬ್ಯಾಂಕ್ ಖಾತೆ ಬದಲಾವಣೆ ಇತ್ಯಾದಿ ಇದ್ದಲ್ಲಿ, ಗ್ರಾಹಕರು ವಿತರಕರನ್ನು ಸಂಪರ್ಕಿಸಬೇಕು. ಅವರು ಗ್ರಾಹಕರಿಗೆ ಮಾರ್ಗದರ್ಶನ ಮಾಡುವುದಲ್ಲದೆ, ಅಗತ್ಯ ದಾಖಲೀಕರ ಣಕ್ಕೂ ಸಹಾಯ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.