ನವದೆಹಲಿ: ಚೆನ್ನೈ ಮೂಲದ ಇಂಡಿಯಾ ಸಿಮೆಂಟ್ ಲಿಮಿಟೆಡ್‌ನಲ್ಲಿ ಶೇ 23ರಷ್ಟು ಷೇರುಗಳ ಖರೀದಿಗೆ ನಿರ್ಧರಿಸಲಾಗಿದ್ದು, ಇದಕ್ಕಾಗಿ ₹1,900 ಕೋಟಿ ವ್ಯಯಿಸಲಾಗುವುದು ಎಂದು ದೇಶದ ಪ್ರಮುಖ ಸಿಮೆಂಟ್ ತಯಾರಿಕಾ ಕಂಪನಿ ಅಲ್ಟ್ರಾಟೆಕ್ ಗುರುವಾರ ತಿಳಿಸಿದೆ.
ಪ್ರತಿ ಷೇರಿಗೆ ₹267 ದರ ನಿಗದಿಪಡಿಸಲಾಗಿದ್ದು, ಒಟ್ಟು 7.06 ಕೋಟಿ ಷೇರುಗಳನ್ನು ಖರೀದಿಸಲಾಗುವುದು. ಇದಕ್ಕೆ ಆಡಳಿತ ಮಂಡಳಿಯು ಒಪ್ಪಿಗೆ ನೀಡಿದೆ ಎಂದು ಆದಿತ್ಯ ಬಿರ್ಲಾ ಸಮೂಹಕ್ಕೆ ಸೇರಿದ ಅಲ್ಟ್ರಾಟೆಕ್ ಕಂಪನಿಯು, ಷೇರುಪೇಟೆಗೆ ಮಾಹಿತಿ ನೀಡಿದೆ.
ಪ್ರಸ್ತುತ ಅಲ್ಟ್ರಾಟೆಕ್ ಕಂಪನಿಯು ವಾರ್ಷಿಕ 152.7 ದಶಲಕ್ಷ ಟನ್‌ನಷ್ಟು ಸಿಮೆಂಟ್ ಉತ್ಪಾದಿಸುತ್ತಿದೆ. ಉತ್ಪಾದನಾ ಸಾಮರ್ಥ್ಯದ ವಿಸ್ತರಣೆಗೆ ಮುಂದಾಗಿದೆ. ಹಾಗಾಗಿ, ಮಹಾರಾಷ್ಟ್ರದಲ್ಲಿ ಇರುವ ಇಂಡಿಯಾ ಸಿಮೆಂಟ್‌ನ ಗ್ರೈಂಡಿಂಗ್ ಘಟಕವನ್ನು ₹315 ಕೋಟಿ ವೆಚ್ಚದಲ್ಲಿ ಸ್ವಾಧೀನಪಡಿಸಿಕೊಳ್ಳುವುದಾಗಿ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.