ADVERTISEMENT

ತಗ್ಗಿದ ನಿರುದ್ಯೋಗ ಪ್ರಮಾಣ: ಎನ್‌ಎಸ್‌ಎಸ್‌ಒ ವರದಿ

ಪಿಟಿಐ
Published 15 ಮೇ 2024, 14:19 IST
Last Updated 15 ಮೇ 2024, 14:19 IST
   

ನವದೆಹಲಿ: ಜನವರಿ– ಮಾರ್ಚ್‌ ತ್ರೈಮಾಸಿಕದಲ್ಲಿ ದೇಶದ ನಗರ ಪ್ರದೇಶದಲ್ಲಿ 15 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯೋಮಾನದವರ ನಿರುದ್ಯೋಗದ ಪ್ರಮಾಣವು ಶೇ 6.7ಕ್ಕೆ ಇಳಿಕೆಯಾಗಿದೆ ಎಂದು ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿಯ (ಎನ್‌ಎಸ್‌ಎಸ್‌ಒ) ವರದಿ ತಿಳಿಸಿದೆ.

ದುಡಿಯುವ ವರ್ಗದಲ್ಲಿ ಇರುವ ನಿರುದ್ಯೋಗಿಗಳ ಶೇಕಡಾವಾರು ಲೆಕ್ಕಾಚಾರದ ಮೇಲೆ ಈ ಸಮೀಕ್ಷೆ ನಡೆಸಲಾಗುತ್ತದೆ.

2022–23ರ ಮಾರ್ಚ್‌ ತ್ರೈಮಾಸಿಕದಲ್ಲಿ ನಿರುದ್ಯೋಗದ ಪ್ರಮಾಣವು ಶೇ 6.8ರಷ್ಟಿತ್ತು. ಏಪ್ರಿಲ್‌–ಜೂನ್‌ ಹಾಗೂ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 6.6ರಷ್ಟು ಇತ್ತು. ಅಕ್ಟೋಬರ್‌–ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 6.5ಕ್ಕೆ ಇಳಿಕೆಯಾಗಿತ್ತು ಎಂದು 22ನೇ ಆವರ್ತಕ ಕಾರ್ಮಿಕ ಸಮೀಕ್ಷಾ ವರದಿ ತಿಳಿಸಿದೆ.

ADVERTISEMENT

ನಗರ ಪ್ರದೇಶದಲ್ಲಿ ಮಹಿಳೆಯರ ನಿರುದ್ಯೋಗ ಪ್ರಮಾಣವು ಶೇ 8.5ಕ್ಕೆ ಇಳಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 9.2ರಷ್ಟು ಇತ್ತು.  

ಪುರುಷರ ನಿರುದ್ಯೋಗದ ಪ್ರಮಾಣ ಶೇ 6.1ರಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇ 6ರಷ್ಟಿತ್ತು ಎಂದು ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.