ADVERTISEMENT

ಯೂನಿಯನ್‌ ಬ್ಯಾಂಕ್‌ನಿಂದ ರಿಟೇಲ್‌ ಎಕ್ಸ್‌ಪೊ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 13:27 IST
Last Updated 24 ಫೆಬ್ರುವರಿ 2024, 13:27 IST
ಬೆಂಗಳೂರಿನ ಅರಮನೆ ಮೈದಾನದ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಮ್ಮಿಕೊಂಡಿದ್ದ ‘ರಿಟೇಲ್‌ಥಾನ್‌–2024’ ಕಾರ್ಯಕ್ರಮವನ್ನು ಬ್ಯಾಂಕ್‌ನ ಬೆಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕರು ಹಾಗೂ ವಲಯ ಮುಖ್ಯಸ್ಥರಾದ ನವನೀತ್‌ ಕುಮಾರ್‌ ಉದ್ಘಾಟಿಸಿದರು. ಈ ವೇಳೆ ಬ್ಯಾಂಕ್‌ನ ಅಧಿಕಾರಿಗಳು ಹಾಜರಿದ್ದರು
ಬೆಂಗಳೂರಿನ ಅರಮನೆ ಮೈದಾನದ ಗ್ರ್ಯಾಂಡ್ ಕ್ಯಾಸಲ್‌ನಲ್ಲಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಹಮ್ಮಿಕೊಂಡಿದ್ದ ‘ರಿಟೇಲ್‌ಥಾನ್‌–2024’ ಕಾರ್ಯಕ್ರಮವನ್ನು ಬ್ಯಾಂಕ್‌ನ ಬೆಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕರು ಹಾಗೂ ವಲಯ ಮುಖ್ಯಸ್ಥರಾದ ನವನೀತ್‌ ಕುಮಾರ್‌ ಉದ್ಘಾಟಿಸಿದರು. ಈ ವೇಳೆ ಬ್ಯಾಂಕ್‌ನ ಅಧಿಕಾರಿಗಳು ಹಾಜರಿದ್ದರು   

ಬೆಂಗಳೂರು: ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಮೆಗಾ ರಿಟೇಲ್‌ ಎಕ್ಸ್‌ಪೊ ‘ರಿಟೇಲ್‌ಥಾನ್‌–2024’ ಅನ್ನು ಶನಿವಾರ ಹಮ್ಮಿಕೊಂಡಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ಯಾಂಕ್‌ನ ಬೆಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕರೂ ಆದ ವಲಯ ಮುಖ್ಯಸ್ಥ ನವನೀತ್‌ ಕುಮಾರ್‌, ಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಒಂದೇ ವೇದಿಕೆಯಡಿ ಶಿಕ್ಷಣ, ಗೃಹ, ವಾಹನ ಸಾಲ ನೀಡಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅರ್ಹ ಗ್ರಾಹಕರಿಗೆ ಸ್ಥಳದಲ್ಲೇ ಸಾಲ ಮಂಜೂರಾತಿ ಪತ್ರವನ್ನು ನೀಡಲಾಗುತ್ತದೆ ಹೇಳಿದರು.

ಬ್ಯಾಂಕ್‌ನ ಬೆಂಗಳೂರು ಪೂರ್ವ ವಲಯದ ಡಿಜಿಎಂ ಮತ್ತು ಪ್ರಾದೇಶಿಕ ಮುಖ್ಯಸ್ಥ ಆರ್‌.ಜ್ಯೋತಿ ಕೃಷ್ಣನ್‌ ಮಾತನಾಡಿ, ಎಕ್ಸ್‌ಪೊದಲ್ಲಿ 65 ಮಳಿಗೆಗಳನ್ನು ಹಾಕಲಾಗಿದ್ದು, ಆಟೊಮೊಬೈಲ್‌ ಡೀಲರ್‌ಗಳು, ವಸತಿ ಯೋಜನೆಗಳ ಡೆವಲಪರ್‌ಗಳು, ಶಿಕ್ಷಣ ಸಲಹೆಗಾರರು, ಸೌರ ಫಲಕ ವಿತರಕರು ಭಾಗವಹಿಸಿದ್ದಾರೆ. ಗ್ರಾಹಕರಿಗಾಗಿ ಲಕ್ಕಿ ಡ್ರಾ ಮತ್ತು ಬಂಪರ್‌ ಬಹುಮಾನಗಳನ್ನು ಆಯೋಜಿಸಲಾಗಿದೆ ಎಂದರು.

ADVERTISEMENT

ಬ್ಯಾಂಕ್‌ನ ಅಧಿಕಾರಿಗಳಾದ ಪಂಕಜ್ ಕುಮಾರ್ ಕಾಪ್ಸಿಮೆ, ಅಸೀಮ್‌ ಕುಮಾರ್‌ ಪಾಲ್‌, ಆರ್‌. ಜ್ಯೋತಿ ಕೃಷ್ಣನ್‌, ರಾಜೇಂದರ್‌ ಕುಮಾರ್‌ ಮತ್ತು ರಾಜೇಶ್‌ಕುಮಾರ್‌ ಮಿಶ್ರಾ ಹಾಗೂ ಬ್ಯಾಂಕ್‌ನ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.