ADVERTISEMENT

ಯೂನಿಯನ್‌ ಬ್ಯಾಂಕ್‌ಗೆ ₹3,328 ಕೋಟಿ ಲಾಭ

ಪಿಟಿಐ
Published 11 ಮೇ 2024, 14:14 IST
Last Updated 11 ಮೇ 2024, 14:14 IST
<div class="paragraphs"><p>ಯೂನಿಯನ್‌ ಬ್ಯಾಂಕ್‌</p></div>

ಯೂನಿಯನ್‌ ಬ್ಯಾಂಕ್‌

   

ಮುಂಬೈ (ಪಿಟಿಐ): ಸರ್ಕಾರಿ ಸ್ವಾಮ್ಯದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ, 2023–24ನೇ ಹಣಕಾಸು ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹3,328 ಕೋಟಿ ನಿವ್ವಳ ಲಾಭಗಳಿಸಿದೆ. 

ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿನ ಲಾಭದ ಪ್ರಮಾಣಕ್ಕೆ ಹೋಲಿಸಿದರೆ ಶೇ 18ರಷ್ಟು ಏರಿಕೆಯಾಗಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತದಲ್ಲಿ ಇಳಿಕೆ ಆಗಿದೆ. ಹಾಗಾಗಿ, ಲಾಭದಲ್ಲಿ ಈ ಮಟ್ಟದ ಬೆಳವಣಿಗೆ ಸಾಧ್ಯವಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ADVERTISEMENT

ಪೂರ್ಣ ಹಣಕಾಸು ವರ್ಷದಲ್ಲಿ ₹13,797 ಕೋಟಿ ನಿವ್ವಳ ಲಾಭಗಳಿಸಿದೆ. ಬಡ್ಡಿ ವರಮಾನದಲ್ಲಿ ಶೇ 14.38ರಷ್ಟು ಹೆಚ್ಚಳವಾಗಿದ್ದು, ₹9,437 ಕೋಟಿ ಗಳಿಸಿದೆ. ಎಂದು ಹೇಳಿದೆ.

‘2024–25ನೇ ಆರ್ಥಿಕ ವರ್ಷದಲ್ಲಿ ಸಾಲ ನೀಡಿಕೆಯಲ್ಲಿ ಶೇ 11ರಿಂದ 13ರಷ್ಟು ಹಾಗೂ ಠೇವಣಿ ಸಂಗ್ರಹದಲ್ಲಿ ಶೇ 9ರಿಂದ 11ರಷ್ಟು ಬೆಳವಣಿಗೆ ಸಾಧಿಸುವ ಗುರಿ ಹೊಂದಲಾಗಿದೆ’ ಎಂದು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಸಿಇಒ ಎ. ಮಣಿಮೇಖಲೈ ತಿಳಿಸಿದ್ದಾರೆ.

ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ₹4,041 ಕೋಟಿಯಿಂದ ₹3,222 ಕೋಟಿಗೆ ಇಳಿಕೆಯಾಗಿದೆ. ಬ್ಯಾಂಕ್‌ನ ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಎನ್‌ಪಿಎ) ಶೇ 7.53ರಿಂದ ಶೇ 4.76ಕ್ಕೆ ತಗ್ಗಿದೆ. ಈ ಆರ್ಥಿಕ ವರ್ಷದಲ್ಲಿ ಇದನ್ನು ಶೇ 4ಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಲ್ಲದೆ, ದೇಶದಾದ್ಯಂತ ಹೊಸದಾಗಿ 250ರಿಂದ 300 ಶಾಖೆಗಳನ್ನು ತೆರೆಯಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.