ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023–24ರ ಆರ್ಥಿಕ ಸಮೀಕ್ಷೆಯ ವರದಿಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಈ ಸಮೀಕ್ಷೆಯನ್ನು ಮುಖ್ಯ ಆರ್ಥಿಕ ಸಲಹೆಗಾರ ವಿ. ಅನಂತ ನಾಗೇಶ್ವರನ್ ಹಾಗೂ ಅವರ ತಂಡ ಸಿದ್ಧಪಡಿಸಿದೆ. ಸಮೀಕ್ಷೆಯ ಮುಖ್ಯಾಂಶಗಳು ಹೀಗಿವೆ...
2023–24ನೇ ಸಾಲಿನ ಆರ್ಥಿಕ ವೃದ್ಧಿದರ ಶೇ 8.2ಕ್ಕೆ ಹೋಲಿಸಿದಲ್ಲಿ 2025ರಲ್ಲಿ ಬೆಳವಣಿಗೆ ದರ ಶೇ 6.5ರಿಂದ 7ರಷ್ಟು ಇರಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಮುಂದುವರಿದಿರುವುದು ರಾಜಕೀಯ ಹಾಗೂ ನೀತಿ ನಿರಂತರತೆಯನ್ನು ಸೂಚಿಸುತ್ತದೆ ಎಂದು ಸಮೀಕ್ಷಾ ವರದಿಯಲ್ಲಿ ಹೇಳಲಾಗಿದೆ.
ಅನಿಶ್ಚಿತ ಜಾಗತಿಕ ಆರ್ಥಿಕ ಕಾರ್ಯಕ್ಷಮತೆಯ ಹೊರತಾಗಿಯೂ FY24 ರಲ್ಲಿ ದೇಶೀಯ ಬೆಳವಣಿಗೆಯ ವಾಹಕಗಳು ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಿವೆ
ಭೌಗೋಳಿಕ ರಾಜಕೀಯ ಸವಾಲುಗಳ ಮೂಲಕ ಸ್ಥಿತಿಸ್ಥಾಪಕತ್ವವನ್ನು ಪ್ರದರ್ಶಿಸುವ ಭಾರತೀಯ ಆರ್ಥಿಕತೆಯು ಬಲವಾದ ಹೆಜ್ಜೆಗಳನ್ನಿಡುತ್ತಿದೆ
ಕೋವಿಡ್ ನಂತರದ ಆರ್ಥಿಕ ಚೇತರಿಕೆಯಲ್ಲಿ, ದೇಶೀಯ ಮಾರುಕಟ್ಟೆಯಲ್ಲಿನ ಭಾರಿ ಬೆಳವಣಿಗೆ ಆರ್ಥಿಕತೆಗೆ ಸಹಕಾರಿಯಾಗಿದೆ.
ವ್ಯಾಪಾರ, ಹೂಡಿಕೆ ಹಾಗೂ ಹವಾಮಾನ ವಿಷಯದಲ್ಲಿ ಪ್ರಮುಖ ಜಾಗತಿಕ ಸಮಸ್ಯೆಗಳಲ್ಲಿನ ಒಪ್ಪಂದಗಳು ಬಹಳಷ್ಟು ಸಮಸ್ಯೆ ಸೃಷ್ಟಿಸಿವೆ.
ಅಲ್ಪಕಾಲಿಕ ಹಣ ದುಬ್ಬರವು ಆರಂಭವಾಗಿದೆ. ಆದರೆ ಭಾರತದಲ್ಲಿ ಬೇಳೆಕಾಳುಗಳ ಇಳುವರಿ ಕುಸಿದು ಬೆಲೆ ಏರಿಕೆ ಬಿಸಿ ತಟ್ಟಿದೆ.
ಸಾಮಾನ್ಯ ಮುಂಗಾರು ನಿರೀಕ್ಷಿಸಲಾಗಿದೆ ಹಾಗೂ ಆಮದು ಪ್ರಮಾಣ ತಗ್ಗುವ ಸಾಧ್ಯತೆ ಇದೆ. ಆರ್‌ಬಿಐನಿಂದ ಹಣದುಬ್ಬರಕ್ಕೆ ಪೂರಕವಲ್ಲದ ಬೆಳವಣಿಗೆಯನ್ನು ನಿರೀಕ್ಷಿಸಲಾಗುತ್ತಿದೆ
ಬಡವರು ಹಾಗೂ ಕಡಿಮೆ ಆದಾಯ ಹೊಂದಿರುವ ಗ್ರಾಹಕರು ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿದ್ದಾರೆ. ಇವುಗಳನ್ನು ನೇರ ಲಾಭ ವರ್ಗಾವಣೆ ಅಥವಾ ಸರಿಯಾದ ಅವಧಿಗೆ ಮಾನ್ಯವಾದ ನಿರ್ದಿಷ್ಟ ಖರೀದಿಗಳಿಗೆ ಕೂಪನ್‌ಗಳ ಮೂಲಕ ನಿರ್ವಹಿಸಬಹುದು.
ಆಹಾರ ಪದಾರ್ಥಗಳನ್ನು ಹೊರತುಪಡಿಸಿ ಭಾರತದ ಹಣದುಬ್ಬರ ಗುರಿಯ ಚೌಕಟ್ಟು ಹಣದುಬ್ಬರ ದರವನ್ನು ಗುರಿಯಾಗಿಸುತ್ತದೆಯೇ ಎಂಬುದನ್ನು ಅನ್ವೇಷಿಸುವ ಮಾರ್ಗಗಳನ್ನು ಸಮೀಕ್ಷೆಯಲ್ಲಿ ಸಲಹೆಯಾಗಿ ನೀಡಲಾಗಿದೆ.
ಭೌಗೋಳಿಕ ರಾಜಕೀಯ ಘರ್ಷಣೆಗಳ ಉಲ್ಬಣ ಮತ್ತು ಅದರ ಪರಿಣಾಮವು RBI ನ ಹಣಕಾಸು ನೀತಿಯ ನಿಲುವಿನ ಮೇಲೆ ಪ್ರಭಾವ ಬೀರಬಹುದು ಎಂದು ಸಮೀಕ್ಷೆ ಹೇಳಿದೆ.
ಭಾರತದ ಹಣಕಾಸು ಕ್ಷೇತ್ರದ ಭವಿಷ್ಯ ಉಜ್ವಲವಾಗಿದೆ ಎಂದು ಸಮೀಕ್ಷೆ ಹೇಳಿದೆ.
ಹಣಕಾಸಿನ ವಲಯವು ನಿರ್ಣಾಯಕ ಹಂತದಲ್ಲಿದ್ದು, ಜಾಗತಿಕವಾಗಿ ಅಥವಾ ಸ್ಥಳೀಯವಾಗಿ ಸೃಷ್ಟಿಯಾಗುವ ದುರ್ಬಲತೆಗಳ ಸಾಧ್ಯತೆಯ ದುರ್ಬಲತೆಗಳಿಗೆ ಸಿದ್ಧರಾಗಲು ಎಚ್ಚರಿಕೆ ನೀಡಲಾಗಿದೆ.
ಖಾಸಗಿ ವಲಯ ಹಾಗೂ ಬ್ಯಾಂಕ್‌ಗಳ ಹಣಕಾಸು ಸ್ಥಿತಿಯ ಆರೋಗ್ಯ ಸ್ಥಿತಿಯಲ್ಲಿದ್ದು, ಇದು ಇನ್ನಷ್ಟು ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಆರ್ಥಿಕ ಸಮೀಕ್ಷೆ 2023–24ರಲ್ಲಿ ಹೇಳಲಾಗಿದೆ.
ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ಭಾರತದ ನೀತಿಗಳು ಬೆಲೆ ಸ್ಥಿರತೆಯನ್ನು ಖಾತ್ರಿಪಡಿಸುವ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದೆ.
ತೆರಿಗೆ ಅನುಸರಣೆಯ ಲಾಭಗಳು, ಖರ್ಚು ತಡೆ ಮತ್ತು ಡಿಜಟಲೀಕರಣವು ಭಾರತ ಸರ್ಕಾರದ ಹಣಕಾಸಿನ ನಿರ್ವಹಣೆಯಲ್ಲಿ ಉತ್ತಮ ಸಮತೋಲನವನ್ನು ಸಾಧಿಸಲು ಸಹಾಯ ಮಾಡುತ್ತದೆ
ಬಂಡವಾಳ ಮಾರುಕಟ್ಟೆಯು ಭಾರತದ ಬೆಳವಣಿಗೆಯ ಹಾದಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಭೌಗೋಳಿಕ ರಾಜಕೀಯ ಘರ್ಷಣೆಗಳ ಉಲ್ಬಣವನ್ನು ಸಮರ್ಥವಾಗಿ ಎದುರಿಸುತ್ತಿದೆ
ಕೃತಕ ಬುದ್ಧಿಮತ್ತೆಯು ಎಲ್ಲಾ ಕೌಶಲ ಉದ್ಯಮ ಕ್ಷೇತ್ರಗಳಲ್ಲಿ ಕಾರ್ಮಿಕರ ಮೇಲೆ ಪ್ರಭಾವ ಬೀರಿದೆ
ಚೀನಾದಿಂದ ವಿದೇಶಿ ಬಂಡವಾಳ ಹೂಡಿಕೆಯು ಹೆಚ್ಚಿನ ಪ್ರಮಾಣದಲ್ಲಿದ್ದು, ಜಾಗತಿಕ ಪೂರಕ ಸರಪಳಿ ಹಾಗೂ ರಫ್ತು ಕ್ಷೇತ್ರದಲ್ಲಿ ಭಾರತಕ್ಕೆ ನೆರವಾಗಲಿದೆ.
ಅನಾರೋಗ್ಯಕರ ಆಹಾರದಿಂದಾಗಿ ಶೇ 54ರಷ್ಟು ಕಾಯಿಲೆಗಳು ದೇಶಕ್ಕೆ ಹೊರೆಯಾಗಿವೆ. ಹೀಗಾಗಿ ಸಮತೋಲನ ಆಹಾರದತ್ತ ಮುಖ ಮಾಡುವ ಅಗತ್ಯವಿದೆ.
2024ರಲ್ಲಿ ಭಾರತಕ್ಕೆ ಸಂದಾಯವಾಗಿದ್ದು ಶೇ 3.7ರ ದರದಲ್ಲಿ 124 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು. 2025ರಲ್ಲಿ ಇದು 129 ಶತಕೋಟಿ ಅಮೆರಿಕನ್ ಡಾಲರ್‌ಗೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು 2023–24ನೇ ಸಾಲಿನ ಆರ್ಥಿಕ ಸಮೀಕ್ಷೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.