ರಾಯಿಟರ್ಸ್: ವಿದ್ಯುತ್ ಚಾಲಿತ ವಾಹನಗಳನ್ನು ಭಾರತದಲ್ಲಿ ತಯಾರಿಸಿ ರಫ್ತು ಮಾಡುವ ಆಲೋಚನೆಯನ್ನು ಕೈಬಿಟ್ಟಿರುವುದಾಗಿ ಫೋರ್ಡ್ ಮೋಟರ್ ಕಂಪನಿ ಗುರುವಾರ ತಿಳಿಸಿದೆ.
ಇ.ವಿ.ಗಳನ್ನು ಭಾರತದ ತನ್ನ ಘಟಕಗಳಲ್ಲಿ ತಯಾರಿಸಲಾಗುವುದು ಎಂದು ಕಂಪನಿಯು ಫೆಬ್ರುವರಿಯಲ್ಲಿ ಹೇಳಿತ್ತು. ‘ಆದರೆ, ಭಾರತದ ಯಾವುದೇ ಘಟಕದಲ್ಲಿ ಇ.ವಿ. ತಯಾರಿಸಿ ರಫ್ತು ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೇವೆ’ ಎಂದು ಕಂಪನಿಯ ವಕ್ತಾರರೊಬ್ಬರು ತಿಳಿಸಿದ್ದಾರೆ. ಈ ತೀರ್ಮಾನಕ್ಕೆ ಕಾರಣ ಏನು ಎಂಬುದನ್ನು ಕಂಪನಿಯು ತಿಳಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.