ಬೆಂಗಳೂರು: ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಅಥವಾ ಸಾಮಾನ್ಯವಾಗಿ ಯುಪಿಐ ಎಂದು ಕರೆಯಲಾಗುವ ಪಾವತಿ ವ್ಯವಸ್ಥೆಯು ಮುಂದಿನ ಎರಡು ದಿನಗಳವರೆಗೆ ರಾತ್ರಿ 1 ರಿಂದ 3 ರವರೆಗೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಗುರುವಾರ ಹೇಳಿದೆ.
'ಯುಪಿಐ ವಹಿವಾಟಿನ ಬೆಳವಣಿಗೆಗೆ ಪೂರಕವಾದ ರಚನೆ ರೂಪಿಸಲು ಯುಪಿಐ ಮುಂದಿನ ಕೆಲವು ದಿನಗಳವರೆಗೆ ರಾತ್ರಿ 1ರಿಂದ 3ರ ವರೆಗೆ ನವೀಕರಣ ಪ್ರಕ್ರಿಯೆ ನಡೆಯಲಿದೆ' ಎಂದು ಎನ್‌ಪಿಸಿಐ ತಿಳಿಸಿದೆ.
ಈ ಅವಧಿಯಲ್ಲಿ ಮಾಡಬೇಕಾದ ಯಾವುದೇ ಪಾವತಿಯನ್ನು ಮುಂದೂಡುವಂತೆಯೂ ಅದು ಮನವಿ ಮಾಡಿದೆ.
ಗೂಗಲ್ ಪೇ, ಫೋನ್ ಪೇ ಸೇರಿದಂತೆ ಪ್ರಮುಖ ಡಿಜಿಟಲ್ ಪಾವತಿ ವ್ಯವಸ್ಥೆಗಳು ಯುಪಿಐ ಮೂಲಕವೇ ಕಾರ್ಯನಿರ್ವಹಣೆ ಮಾಡುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.