ADVERTISEMENT

ಚೀನಾ ಮೂಲದ ಹುವೈ, ಝೆಡ್‌ಟಿಇಗೆ ಅಮೆರಿಕದಲ್ಲಿ ನಿಷೇಧ

ಮಾರಾಟ ಮತ್ತು ಸೇವೆ ಸ್ಥಗಿತಕ್ಕೆ ಸರ್ಕಾರದ ಆದೇಶ

ಏಜೆನ್ಸೀಸ್
Published 29 ನವೆಂಬರ್ 2022, 7:44 IST
Last Updated 29 ನವೆಂಬರ್ 2022, 7:44 IST
   

ವಾಷಿಂಗ್ಟನ್: ಚೀನಾ ಮೂಲದ ಹುವೈ ಮತ್ತು ಝೆಡ್‌ಟಿಇ ಕಂಪನಿ ತಯಾರಿಸಿರುವ ಎಲ್ಲ ಮಾದರಿಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಉಪಕರಣಗಳ ಮಾರಾಟ ಮತ್ತು ಬಳಕೆಗೆ ಅಮೆರಿಕ ನಿಷೇಧ ಹೇರಿದೆ.

ಚೀನಾ ಮೂಲದ ಉಪಕರಣಗಳ ಬಳಕೆ ದೇಶದ ಭದ್ರತೆಗೆ ಅಪಾಯ ತರಬಲ್ಲದು, ಹೀಗಾಗಿ ಅವುಗಳನ್ನು ಬಳಸಬಾರದು ಎಂದು ಸರ್ಕಾರ ಹೇಳಿದೆ.

ಐದು ಜನ ಸದಸ್ಯರಿದ್ದ ಫೆಡರಲ್ ಸಂವಹನ ಆಯೋಗ, ಚೀನಾ ಮೂಲದ ಉಪಕರಣಗಳ ಬಳಕೆಗೆ ಅಮೆರಿಕದ ನಿಷೇಧವನ್ನು ಎತ್ತಿ ಹಿಡಿದಿದೆ.

ADVERTISEMENT

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅವಧಿಯಲ್ಲಿ ಚೀನಾ ಮೂಲದ ಹುವೈ ಮತ್ತು ಝೆಡ್‌ಟಿಇ ಕಂಪನಿಗಳ ಉತ್ಪನ್ನಗಳ ಮಾರಾಟ ಮತ್ತು ಬಳಕೆಗೆ ನಿಷೇಧ ಹೇರಲಾಗಿತ್ತು.

ದೇಶದ ಭದ್ರತೆ ಮತ್ತು ಸಾರ್ವಜನಿಕರ ಖಾಸಗಿತನಕ್ಕೆ ಚೀನಾ ಮೂಲದ ಉಪಕರಣಗಳು ಅಪಾಯ ತರಬಲ್ಲದು. ಹೀಗಾಗಿ ಅವುಗಳನ್ನು ನಿಷೇಧಿಸಬೇಕು ಎಂದು ಸರ್ಕಾರ ಆದೇಶಿಸಿತ್ತು. ಪ್ರಸಕ್ತ ಅಧ್ಯಕ್ಷ ಜೋ ಬೈಡನ್ ಅವರ ಅವಧಿಯಲ್ಲೂ ನಿಷೇಧ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.