ನವದೆಹಲಿ: ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ 2022–23ರಲ್ಲಿ ಆಗಿರುವ ಹೂಡಿಕೆಯು ಶೇಕಡ 25ರಷ್ಟು ಹೆಚ್ಚಾಗಿ ₹ 1.56 ಲಕ್ಷ ಕೋಟಿಗೆ ತಲುಪಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್‌ಗಳ ಒಕ್ಕೂಟ (ಎಎಂಎಫ್‌ಐ) ಹೇಳಿದೆ.
2021–22ರಲ್ಲಿ ಎಸ್‌ಐಪಿ ಮೂಲಕ ₹ 1.24 ಲಕ್ಷ ಕೋಟಿ ಹೂಡಿಕೆ ಆಗಿತ್ತು. ಮ್ಯೂಚುವಲ್ ಫಂಡ್‌ಗಳಿಗೆ ಎಸ್‌ಐಪಿ ಹೂಡಿಕೆಯ ಕೊಡುಗೆಯು ಏಳು ವರ್ಷ
ಗಳಲ್ಲಿ 3ಪಟ್ಟು ಹೆಚ್ಚಾಗಿದೆ. 2016–17ರಲ್ಲಿ ಹೂಡಿಕೆಯು ₹ 43,921 ಕೋಟಿಯಷ್ಟು ಇತ್ತು ಎಂದು ಹೇಳಿದೆ.
ಹೂಡಿಕೆದಾರರು ದೀರ್ಘಾವಧಿಯ ಬೆಳವಣಿಗೆಯಲ್ಲಿ ನಂಬಿಕೆ ಮುಂದುವರಿಸಲಿದ್ದು, ಎಸ್‌ಐಪಿ ಮತ್ತು ಲಂಪ್ ಸಮ್ ಮೂಲಕ ಹೂಡಿಕೆ ಮಾಡಲಿದ್ದಾರೆ ಎಂದು ಕೋಟಕ್ ಮಹೀಂದ್ರ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯ ಮುಖ್ಯಸ್ಥ ಮನೀಷ್ ಮೆಹ್ತಾ ಹೇಳಿದ್ದಾರೆ.
ಎಸ್‌ಐಪಿ ನಿರ್ವಹಣಾ ಸಂಪತ್ತು ಮೌಲ್ಯವು 2023ರ ಮಾರ್ಚ್ ಅಂತ್ಯಕ್ಕೆ ಶೇ 18ರಷ್ಟು ಹೆಚ್ಚಾಗಿ ₹ 6.83 ಲಕ್ಷ ಕೋಟಿಗೆ ತಲುಪಿದೆ. 2022ರ ಮಾರ್ಚ್ ಅಂತ್ಯದಲ್ಲಿ ಇದು ₹ 5.76 ಲಕ್ಷ ಕೋಟಿಯಷ್ಟು ಇತ್ತು. ಸದ್ಯ ಮ್ಯೂಚುವಲ್ ಫಂಡ್ ಉದ್ಯಮದಲ್ಲಿ 6.36 ಕೋಟಿ ಎಸ್‌ಐಪಿ ಖಾತೆಗಳಿವೆ.
2023ರ ಮಾರ್ಚ್ 31ರ ಅಂತ್ಯಕ್ಕೆ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳ ಮೂಲಕ ₹ 1.46 ಲಕ್ಷ ಕೋಟಿ ಬಂಡವಾಳ ಹೂಡಿಕೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.