ADVERTISEMENT

ವೇದಾಂತ: ನೌಕರರ ಕುಟುಂಬಕ್ಕೆ ನೆರವು

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 16:20 IST
Last Updated 14 ಜೂನ್ 2021, 16:20 IST

ಬೆಂಗಳೂರು: ಕೋವಿಡ್‌ ಸಾಂಕ್ರಾಮಿಕಕ್ಕೆ ಬಲಿಯಾದ ತನ್ನ ವಾಣಿಜ್ಯ ಪಾಲುದಾರರ ಕುಟುಂಬದ ಸದಸ್ಯರಿಗೆ ವೇದಾಂತ ಕಂಪನಿಯು ₹ 10 ಲಕ್ಷ ಪರಿಹಾರ ನೀಡಲಿದೆ. ಅಲ್ಲದೆ, ಮೃತ ನೌಕರರ ಕಡೆಯ ತಿಂಗಳ ಸಂಬಳದ ಮೊತ್ತವನ್ನು ಅವರ ಕುಟುಂಬಕ್ಕೆ, ನೌಕರ ಜೀವಂತವಾಗಿದ್ದಿದ್ದರೆ ಎಷ್ಟು ವರ್ಷ ಕೆಲಸ ಮಾಡುತ್ತಿದ್ದನೋ ಅಷ್ಟು ವರ್ಷದವರೆಗೆ ಕಂಪನಿ ನೀಡಲಿದೆ.

ಮೃತ ನೌಕರರ ಇಬ್ಬರು ಮಕ್ಕಳಿಗೆ ಅವರ ಪದವಿ ಶಿಕ್ಷಣದವರೆಗೆ ಕಂಪನಿ ನೆರವು ನೀಡಲಿದೆ ಎಂದು ಪ್ರಕಟಣೆ ತಿಳಿಸಿದೆ. ‘ನಮ್ಮ ನೌಕರರು ಹಾಗೂ ವಾಣಿಜ್ಯ ಪಾಲುದಾರರು ನಮ್ಮ ಪಾಲಿನ ಅತಿದೊಡ್ಡ ಸಂಪನ್ಮೂಲ. ಅವರ ಸುರಕ್ಷತೆ ಹಾಗೂ ಕ್ಷೇಮ ನಮಗೆ ಬಹಳ ಮುಖ್ಯ’ ಎಂದು ಕಂಪನಿಯ ಅಧ್ಯಕ್ಷ ಅನಿಲ್ ಅಗರ್ವಾಲ್ ಹೇಳಿದ್ದಾರೆ. ತನ್ನ ನೌಕರರು ಹಾಗೂ ವಾಣಿಜ್ಯ ಪಾಲುದಾರರಿಗೆ ಲಸಿಕೆ ನೀಡಲು ಕಂಪನಿಯು ಒಟ್ಟು ₹ 12.6 ಕೋಟಿ ವೆಚ್ಚ ಮಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT